ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: 2023-24ನೇ ಸಾಲಿನ ಆಸ್ತಿ ತೆರಿಗೆಯನ್ನು ಏ.1 ರಿಂದ 30 ರೊಳಗಾಗಿ ಪಾವತಿಸಿದಲ್ಲಿ ಆಸ್ತಿ ತೆರಿಗೆಯ ಮೇಲೆ ಶೇ.5 ರಷ್ಟು ವಿನಾಯಿತಿಯನ್ನು ಕಲ್ಪಿಸಲಾಗಿದೆ. ಆದ್ದರಿಂದ ಆಸ್ತಿ ಮಾಲೀಕರು ಶೇ.5 ರ ವಿನಾಯಿತಿಯ ಪ್ರಯೋಜನ ಪಡೆದುಕೊಳ್ಳಬಹುದೆಂದು ಶಿರಾಳಕೊಪ್ಪದ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆಯನ್ನು ಏ.1 ರಿಂದ 30ರವರೆಗೆ ಶೇ.5 ರಿಯಾಯಿತಿಯಲ್ಲಿ, ಮೇ 1 ರಿಂದ ಜೂನ್ 30 ರವರೆಗೆ ದಂಡ ರಹಿತವಾಗಿ ಹಾಗೂ ಜುಲೈ 1 ರಿಂದ ಮಾಸಿಕ ಶೇ.2 ರಂತೆ ದಂಡ ವಿಧಿಸಿ ಪಾವತಿ ಮಾಡಲಾಗುವುದು.
READ | ತಂದೆಯ ಸಾವಾದರೂ ಪರೀಕ್ಷೆ ಬರೆದ ವಿದ್ಯಾರ್ಥಿನಿ, ಇದು ಹೃದಯ ಕಲಕುವ ಘಟನೆ
ವಿಶೇಷ ಸೂಚನೆ
ಕಟ್ಟಡ/ ಖಾಲಿ ನಿವೇಶನ ಛಾಯಾಚಿತ್ರ, ಮಾಲೀಕರ ಭಾವಚಿತ್ರ ಮಾಲೀಕತ್ವದ ದಾಖಲೆ, ಚುನಾವಣಾ ಗುರುತಿನ ಚೀಟಿ, ಇತ್ತೀಚಿನ ವಿದ್ಯುತ್ ಬಿಲ್ ಪ್ರತಿಯನ್ನು ತೆರಿಗೆ ವಿವರ ಪಟ್ಟಿಯೊಂದಿಗೆ ಸಲ್ಲಿಸಿ ನಿಮ್ಮ ಆಸ್ತಿಯ ಆನ್ ಲೈನ್ ದಾಖಲಾತಿಗೆ ಸಹಕರಿಸುವಂತೆ ಕೋರಿದ್ದಾರೆ.