Leopard death | ತೀರ್ಥಹಳ್ಳಿಯಲ್ಲಿ ಆತಂಕ ಸೃಷ್ಟಿಸಿದ ಚಿರತೆ ನಿಗೂಢ ಸಾವು!

Leopard

 

 

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಕೆಲವು ದಿನಗಳಿಂದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ನಿಗೂಢವಾಗಿ ಮೃತಪಟ್ಟಿದ್ದು, ಇದರ ವಿಡಿಯೋ ಸಹ ಭಾರೀ ವೈರಲ್ ಆಗಿದೆ.
ತಾಲೂಕಿನ ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಜನರಲ್ಲಿ ಈ ಚಿರತೆ ಆತಂಕ ಸೃಷ್ಟಿಸಿತ್ತು.
ಸಾರ್ವಜನಿಕರ ದೂರಿನ ಮೇರೆಗೆ ಚಿರತೆಯನ್ನು ಸೆರೆ ಹಿಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಬೋನು ಇಡಲಾಗಿತ್ತು. ಆದರೆ, ಚಿರತೆಯು ಬೋನಿಗೆ ಬಿದ್ದಿರಲಿಲ್ಲ.

READ | ತಂದೆ ಸಾವಾದರೂ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿ, ಇದು ಮನ ಕುಲುಕುವ ಘಟನೆ

ನಿತ್ರಾಣಗೊಂಡಿದ್ದ ಚಿರತೆ ಸಾವು
ಶುಕ್ರವಾರ ಸಾರ್ವಜನಿಕರಿಗೆ ಚಿರತೆ ಕಾಣಿಸಿಕೊಂಡಿದ್ದು, ಭಾರೀ ನಿತ್ರಾಣಗೊಂಡಿತ್ತು. ಮರ ಹತ್ತುವುದಕ್ಕಾಗಿ ಪ್ರಯತ್ನಿಸುತ್ತಿದ್ದ ಚಿರತೆ ಕೆಳಗೆ ಬಿದ್ದು ಜನರ ಕಣ್ಮುಂದೆಯೇ ಮೃತಪಟ್ಟಿದೆ. ಇದನ್ನು ಕೆಲವರು ವಿಡಿಯೋ‌ ಸಹ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಚಿರತೆಯ ಸಾವಿನ ವಿಚಾರ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಸಾವಿಗೆ ದೇಹದ ಮೇಲಾದ ಗುರುತರ ಪೆಟ್ಟು ಕಾರಣವಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Operation Leopard | ಬೆಳಗಾವಿಯಲ್ಲಿ ಸಕ್ರೆಬೈಲು ಆನೆಬಿಡಾರದ ಗಜಪಡೆ ಕಾರ್ಯಾಚರಣೆ, ಆನೆಗಳ ಬಗ್ಗೆ ಇಲ್ಲಿದೆ ಕುತೂಹಲಕಾರಿ ಅಂಶಗಳು

 

error: Content is protected !!