ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾ.19 ರಂದು ನಗರದ ಫುಡ್ ಕೋರ್ಟ್ ಬಳಿ ಸುಸ್ತಾದಂತೆ ಕುಳಿತಿದ್ದ ಸುಮಾರು 40 ರಿಂದ 45 ವರ್ಷದ ಅಪರಿಚಿತ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆ(meggan hospital)ಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗಿದೆ ಮೃತ ಪಟ್ಟಿರುತ್ತಾರೆ.
ಮೃತನು ಸುಮಾರು 5 ಅಡಿ 9 ಇಂಚು ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ದುಂಡು ಮುಖ ಹೊಂದಿರುತ್ತಾನೆ. ತಲೆಯಲ್ಲಿ 2 ಇಂಚು ಕೂದಲು ಮತ್ತು 2 ಇಂಚು ಉದ್ದದ ಗಡ್ಡ ಮೀಸೆ ಬಿಟ್ಟಿರುತ್ತಾನೆ. ಕಂದು ಬಣ್ಣದ ಅರ್ಧ ತೋಳಿನ ಶರ್ಟ್, ಮಾಸಲು ಬಣ್ಣದ 3/4 ಜೀನ್ಸ್ ಚಡ್ಡಿ ಧರಿಸಿರುತ್ತಾನೆ. ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ (doddapete police station) ದೂ.ಸಂ:08182-261414, 9611761255 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
READ | ಆಯನೂರು ಮಂಜುನಾಥ್ ರೆಬಲ್, ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ, ಅವರು ಮಾಡಿದ ಪ್ರಮುಖ ಆರೋಪಗಳೇನು?