ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲ್ಲೂಕು ಎಂ.ಆರ್.ಎಸ್ (MRS) 110/11 ಕೆವಿ ಎಸ್.ಕೆ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವ ಕಾರಣ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜು ಪಡೆಯುವ ಗಾಜನೂರು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೆಳಕಂಡ ಗ್ರಾಮಗಳಲ್ಲಿ ಏ.18 ರಂದು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
READ | ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ, ಶಿವಮೊಗ್ಗದ ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಗಾಜನೂರು, ಗಾಜನೂರು ಅಗ್ರಹಾರ ಮತ್ತು ಡ್ಯಾಂ, ಸಕ್ರೆಬೈಲು, ತಿಮ್ಲಾಪುರ, ತಟ್ಟಿಕೆರೆ, ವೀರಾಪುರ, ಹೊಸಕೊಪ್ಪ, ಹಾಲಲಕ್ಕವಳ್ಳಿ ಎ & ಬಿ, ಕಡೇಕಲ್, ಯರಗನಾಳ್, ಕುಸ್ಕೂರು, ಸಿದ್ದರಹಳ್ಳಿ, ಇಂದಿರಾನಗರ, ಮುಳ್ಕೆರೆ ಮತ್ತು ಮುತ್ತಿನಕೊಪ್ಪ ವಿದ್ಯುತ್ ವಿತರಣಾ ಕೇಂದ್ರ ಎಫ್-14 ಸಿದ್ದಮ್ಮಾಜಿ ಹೊಸೂರು ಮಾರ್ಗದ ಸಿದ್ದಮ್ಮಾಜಿ ಹೊಸೂರು, ಲಿಂಗಾಪುರ, ಕಾಕನಹಸೂಡಿ, ಉಂಬ್ಳೇಬೈಲು ಕುಡಿಯುವ ನೀರಿನ ಘಟಕ, ಚಿಕ್ಕಳಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
Nomination | ಶಿವಮೊಗ್ಗದಲ್ಲಿ ಇಂದು ಸಲ್ಲಿಕೆಯಾದ ನಾಮಪತ್ರಗಳೆಷ್ಟು? ಎಲ್ಲಿ ಎಷ್ಟು ಸಲ್ಲಿಕೆ?