ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯ 94 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ಪರೀಕ್ಷೆಯಲ್ಲಿ 241 ವಿದ್ಯಾರ್ಥಿಗಳು ಗೈರಾಗಿದ್ದು, ಅತಿ ಹೆಚ್ಚು ಭದ್ರಾವತಿ ತಾಲೂಕಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ನಂತರದ ಸ್ಥಾನದಲ್ಲಿ ಶಿವಮೊಗ್ಗ (83 ವಿದ್ಯಾರ್ಥಿ) ಇದೆ.
READ | ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನವೇ 227 ವಿದ್ಯಾರ್ಥಿಗಳು ಗೈರು, ತಾಲೂಕುವಾರು ಎಷ್ಟು ವಿದ್ಯಾರ್ಥಿಗಳು ಹಾಜರು?
21,339 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದರು. ಅದರಲ್ಲಿ 21,457 ಹಾಜರಾಗಿದ್ದಾರೆ. ಭದ್ರಾವತಿಯಲ್ಲಿ 4103, ಹೊಸನಗರ 1507, ಸಾಗರ 2815, ಶಿಕಾರಿಪುರ 2896, ಶಿವಮೊಗ್ಗ 6111, ಸೊರಬ 2381, ತೀರ್ಥಹಳ್ಳಿ 1644 ಸೇರಿ ಒಟ್ಟು 21,457 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.