ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಒಟ್ಟು 92 ಬೋರ್ ವೆಲ್’ಗಳನ್ನು ಕೊರೆಸಲಾಗಿದ್ದು 63 ಯಶಸ್ವಿಯಾಗಿವೆ. 29 ಫೇಲ್ ಆಗಿವೆ. ಹೀಗಾಗಿ, ನೀರಿನ ಸಮಸ್ಯೆ (water scarcity) ಈಗಾಗಲೇ ಉಲ್ಬಣಿಸಿದ್ದು, 109 ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಕೋಡ್, ಏನಿದರ ಪ್ರಯೋಜನಗಳು?
ಎಲ್ಲಿ ಎಷ್ಟು ಬೋರ್’ವೆಲ್’ಗಳು ವಿಫಲ?
ಶಿವಮೊಗ್ಗ (shimoga) ತಾಲ್ಲೂಕಿನಲ್ಲಿ 8 ಕೊಳವೆ ಬಾವಿ ಕೊರೆಸಲಾಗಿದ್ದು 5 ಯಶಸ್ವಿಯಾಗಿವೆ. ತಾಲ್ಲೂಕಿನ 4 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಭದ್ರಾವತಿ (Bhadravathi) ತಾಲ್ಲೂಕಿನಲ್ಲಿ 2 ಬೋರ್ ತೆಗೆಸಲಾಗಿದ್ದು 1 ಯಶಸ್ವಿಯಾಗಿದೆ. 8 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ.
ಸೊರಬ (Sorab) ತಾಲ್ಲೂಕಿನಲ್ಲಿ 10 ಬೋರ್ ಕೊರೆಸಲಾಗಿದ್ದು 8 ಯಶಸ್ವಿಯಾಗಿವೆ. 5 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ.
ತೀರ್ಥಹಳ್ಳಿ (Thirthahalli) ತಾಲ್ಲೂಕು ವ್ಯಾಪ್ತಿಯಲ್ಲಿ 30 ಬೋರ್ ಕೊರೆಸಿದ್ದು 22 ಯಶಸ್ವಿಗಾಗಿದ್ದು 12 ಗಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ.
ಹೊಸನಗರ (Hosanagar) ತಾಲ್ಲೂಕಿನ 5 ಬೋರ್ ಕೊರೆಸಲಾಗಿದ್ದು 3 ಯಶಸ್ವಿಯಾಗಿದೆ. 40 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ.
ಸಾಗರ (sagar) ತಾಲ್ಲೂಕಿನಲ್ಲಿ 7 ರಲ್ಲಿ 3 ಬೋರ್ ಯಶಸ್ವಿಯಾಗಿದ್ದು 35 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ.
ಶಿಕಾರಿಪುರ (shikaripura) ತಾಲ್ಲೂಕಿನಲ್ಲಿ 30 ಬೋರ್ ಕೊರೆಸಿದ್ದು 21 ಯಶಸ್ವಿಯಾಗಿದೆ. 5 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ.
Siddaramaiah | ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ನಿಮಗೇನು ಗೊತ್ತು? ತಿಳಿಯಬೇಕಾದ 6 ವಿಚಾರಗಳಿವು