
ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತಾಲೂಕಿನ ಕುರುವಳ್ಳಿ (Kuruvalli) ಸಮೀಪ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಜೋಡಿ ಕೊಲೆ(Double Murder)ಯಾಗಿದ್ದು, ಮೃತರನ್ನು ಉತ್ತರ ಕರ್ನಾಟಕ(North Karnataka)ದವರು ಎಂದು ಗುರುತಿಸಲಾಗಿದೆ.
ವಿಶ್ವಕರ್ಮ ಸಮುದಾಯ ಭವನದಲ್ಲಿ ಬೀರೇಶ್ (35) ಹಾಗೂ ಮಂಜಾ (46) ಎಂಬುವವರ ಕೊಲೆಯಾಗಿದೆ. ಇಬ್ಬರು ಕಟ್ಟಡ ಕಾರ್ಮಿಕರೆಂದು ತಿಳಿದುಬಂದಿದೆ. ಇನ್ನಷ್ಟು ಮಾಹಿತಿ ತಿಳಿಯಬೇಕಿದೆ.
READ | ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿರುದ್ಧ ಎಫ್.ಐಆರ್, ಕಾರಣವೇನು?
ಸಮುದಾಯ ಭವನ ನಿರ್ಮಾಣ ಕಾಮಗಾರಿಗಾಗಿ ಬಂದಿದ್ದ ಇವರ ಕೊಲೆ ಬುಧವಾರ ರಾತ್ರಿ ಆಗಿರಬಹುದೆಂದು ಶಂಕಿಸಲಾಗಿದೆ. ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಪೊಲೀಸರ ದೌಡು
ಸಮುದಾಯ ಭವನದಲ್ಲಿ ಜೋಡಿ ಕೊಲೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದೇ ತೀರ್ಥಹಳ್ಳಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಫಾರೆನ್ಸಿಕ್, ಶ್ವಾನದಳ ಅವರು ಸಹ ಭೇಟಿ ಸಾಧ್ಯತೆ ಇದೆ.