Indian Gaur | ಕುಂಸಿ ಬಳಿ ರೈಲ್ವೆ ಹಳಿ ಪಕ್ಕದ ಚರಂಡಿಗೆ ಸಿಲುಕಿದ ಕಾಡುಕೋಣ, ಮುಂದೇನಾಯ್ತು?

Train

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಕುಂಸಿ (Kumsi) ಸಮೀಪದ ರೇಚಿಕೊಪ್ಪ (Rechikoppa) ಗ್ರಾಮದಲ್ಲಿ ಕಾಡುಕೋಣವೊಂದನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿದೆ.
ಕಾಡುಕೋಣಕ್ಕೆ ರೈಲು ಡಿಕ್ಕಿ ಹೊಡೆದ ಪರಿಣಾಮ ಅದು ಗಾಯಗೊಂಡಿತ್ತು. ರೈಲ್ವೆ ಹಳಿ ಪಕ್ಕದ ಚರಂಡಿಯಲ್ಲಿ ಸಿಕ್ಕಿಬಿದ್ದಿತ್ತು. ಮುಂಭಾಗದ ಕಾಲು ಚರಂಡಿಯ ಮೇಲಿದ್ದು, ಸ್ಥಳೀಯರು ಇದನ್ನು ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಕಾಡು ಕೋಣದ ರಕ್ಷಣಾ ಕಾರ್ಯಾಚರಣೆ ನಡೆಸಿ, ಅದಕ್ಕೆ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Rangayana | ರಂಗಾಯಣದಿಂದ ಡಿಪ್ಲೋಮಾ ಕೋರ್ಸ್’ಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

error: Content is protected !!