ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಚುನಾವಣಾ ಪ್ರಯುಕ್ತ ಮಾರ್ಚ್ 29 ರಿಂದ ಏಪ್ರಿಲ್ 3 ರವರೆಗೆ ವಿಶೇಷ ತಪಾಸಣಾ ಕಾರ್ಯಕ್ರಮ ಕೈಗೊಂಡಿದ್ದು 106 ವಾಹನಗಳನ್ನು ಮುಟ್ಟುಗೋಲು ಹಾಕಿ, ಒಟ್ಟು ₹25,48,043 ಗಳನ್ನು ವಸೂಲು ಮಾಡಲಾಗಿದೆ.
READ | ಶಿವಮೊಗ್ಗದ ಈ ಆಟೋ ಚಾಲಕನ ಪ್ರಾಮಾಣಿಕತೆಗೆ ಸೆಲ್ಯೂಟ್ ಮಾಡಲೇಬೇಕು
ಒಟ್ಟು 1191 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ನಿಯಮಬಾಹಿರವಾಗಿ ಮಾರ್ಪಾಡುಗೊಳಿಸಲಾದ ವಾಹನಗಳ ಸಂಖ್ಯೆ 3, ಪರವಾನಗಿ ಉಲ್ಲಂಘನೆ ಮಾಡಿದ ಪ್ರಕರಣ 1, ಸರಕು-ಸಾಗಣೆ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವ ಪ್ರಕರಣ 6, ದೋಷಪೂರಿತ ನೋಂದಣಿ ಫಲಕಗಳುಳ್ಳ ವಾಹನ 1, ಪರವಾನಗಿರಹಿತ/ ಅರ್ಹತಾ ಪತ್ರ ನವೀಕರಿಸದ/ ತೆರಿಗೆ ಪಾವತಿಸದ/ ಅಧಿಕ ಭಾರ ಕೊಂಡೊಯ್ಯುವ ಪ್ರಕರಣ 228 ಸೇರಿದಂತೆ ಒಟ್ಟು 239 ಪ್ರಕರಣಗಳನ್ನು ದಾಖಲಿಸಿ ₹11,01,009 ತೆರಿಗೆ ಹಾಗೂ ₹14,47,034 ದಂಡದ ಮೊತ್ತ ಸೇರಿ ಒಟ್ಟು ₹25,48,043 ಗಳನ್ನು ವಸೂಲು ಮಾಡಲಾಗಿದೆ. ಹಾಗೂ ಒಟ್ಟು 106 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.
Road show | ಶಿವಮೊಗ್ಗದಲ್ಲಿ ಹೇಗಿತ್ತು ಅಮಿತ್ ಶಾ ರೋಡ್ ಶೋ, ವಾಹನ ಬದಲಿಸಿದ್ದೇಕೆ?