Narendra Modi | ಕಾಂಗ್ರೆಸ್ ವಿರುದ್ಧ ಮೋದಿ ಮಾಡಿದ ಮೂರು ಗಂಭೀರ ಆರೋಪಗಳಿವು

Narendra modi

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ಬಿಜೆಪಿಯಿಂದ ಆಯನೂರಿನಲ್ಲಿ ಆಯೋಜಿಸಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಆರೋಪಗಳ ಮಳೆಗೆರೆದರು.

BJP
ಆಯನೂರಿನ ಸಮಾವೇಶದಲ್ಲಿ ಪಾಲ್ಗೊಂಡ ಜನಸಮೂಹ.
  1. ಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಮೂಲ ಕಾರಣವೇ ಕಾಂಗ್ರೆಸ್. ಅವರ ಅಧಿಕಾರ ಅವಧಿಯಲ್ಲಿ ಹೊರ ದೇಶಗಳಿಂದ ಅಡಿಕೆ ಆಮದಿಗೆ ಒಪ್ಪಂದ ಮಾಡಿಕೊಂಡಿದ್ದರು. ನಮ್ಮಲ್ಲೇ ಸಮೃದ್ಧ ಅಡಿಕೆ ಬೆಳೆ ಇರುವಾಗ ಹೊರಗಡೆಯ ಆಮದಿನ‌ ಅಗತ್ಯವೇನಿತ್ತು? ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕನಿಷ್ಠ‌ ಆಮದು ಬೆಲೆಯನ್ನು ಪ್ರತಿ‌ ಕೆಜಿಗೆ ₹100ದಿಂದ ₹350ಕ್ಕೆ ಹೆಚ್ಚಿಸಲಾಗಿದೆ.
  2. ಕರ್ನಾಟಕದಲ್ಲಿ ಹೂಡಿಕೆ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಹೂಡಿಕೆಗೆ ಪೂರಕವಾದ ಕಾನೂನುಗಳನ್ನು ಮಾಡಲಾಗಿದೆ. ಅದನ್ನು ಕಾಂಗ್ರೆಸ್ ಬದಲಿಸುವ ಹುನ್ನಾರ ನಡೆಸಿದೆ. ಇದರಿಂದ ಹೂಡಿಕೆದಾರರೇ ರಾಜ್ಯಕ್ಕೆ ಬರುವುದಿಲ್ಲ. ಇದರಿಂದ ಕರ್ನಾಟಕದವರಿಗೆ ತೊಂದರೆ ಆಗುತ್ತದೆ.
  3. ಶೇ.85ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಸರ್ಕಾರದಿಂದ ಯುವಪೀಳಿಗೆಗೆ ಉದ್ಯೋಗ ನೀಡುವುದು, ಮಹಿಳೆಯರ ರಕ್ಷಣೆ, ರೈತರ ಪ್ರಗತಿ ಸಾಧ್ಯವಿಲ್ಲ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕ‌‌ ಕೆ.ಎಸ್.ಈಶ್ವರಪ್ಪ, ಶಾಸಕರಾದ ಡಿ.ಎಸ್.ಅರುಣ್, ರುದ್ರೇಗೌಡ, ಸಂಸದ ಬಿ.ವೈ.ರಾಘವೇಂದ್ರ, ಪಕ್ಷದ ಅಭ್ಯರ್ಥಿಗಳಾದ ಮಂಗೋಟೆ ರುದ್ರೇಶ್, ಚನ್ನಬಸಪ್ಪ(ಚನ್ನಿ), ಆರಗ ಜ್ಞಾನೇಂದ್ರ, ಹಾಲಪ್ಪ, ಕುಮಾರ ಬಂಗಾರಪ್ಪ, ಬಿ.ವೈ.ವಿಜಯೇಂದ್ರ,‌ ಜೀವರಾಜ್ ಸೇರಿದಂತೆ ಪಕ್ಷದ ಪ್ರಮುಖರು‌ ಉಪಸ್ಥಿತರಿದ್ದರು.

KSRTC Bus | ಪ್ರಯಾಣಿಕರೇ ಗಮನಿಸಿ, ಮೇ 9, 10ರಂದು ಬಸ್ ಸಂಚಾರದಲ್ಲಿ ವ್ಯತ್ಯಯ, ಜಾತ್ರೆಗಳಿಗೂ ಬ್ರೇಕ್

error: Content is protected !!