
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರಾಗಿಗುಡ್ಡ(Ragigudda)ದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ (Rashtriya Raksha University- RRU) ಕ್ಯಾಂಪಸ್ (Campus) ಆರಂಭವಾಗಿದೆ. ಇದು ದೇಶದ ಐದನೇ ಕ್ಯಾಂಪಸ್ ಆಗಿದೆ.
ಗುಜರಾತ್(Gujarat), ಪಾಂಡಿಚೇರಿ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶದಲ್ಲಿ ಈಗಾಗಲೇ ಶಾಖೆಗಳು ಅಸ್ತಿತ್ವದಲ್ಲಿದ್ದು, ಶಿವಮೊಗ್ಗದಲ್ಲಿಈ ವರ್ಷದಿಂದ ತರಗತಿಗಳು ಆರಂಭವಾಗಲಿವೆ.
READ | ಮೈಸೂರು ನ್ಯಾಯಾಲಯದಲ್ಲಿ 45 ಹುದ್ದೆಗಳು ಖಾಲಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಯಾವಾಗಿಂದ ತರಗತಿ ಆರಂಭ?
ಏಪ್ರಿಲ್ 24ರಿಂದ ಪ್ರವೇಶಾತಿ ಆರಂಭಗೊಂಡಿದ್ದು, ಜೂನ್ 15ರ ವರೆಗೆ ಪ್ರವೇಶ ನಡೆಯಲಿದೆ. ಆಗಸ್ಟ್ 1ರಿಂದ 2023-24ನೇ ಶೈಕ್ಷಣಿಕ ಸಾಲಿನ ತರಗತಿಗಳು ಆರಂಭವಾಗಲಿವೆ ಎಂದು ಕ್ಯಾಂಪಸ್ಸಿನ ಪ್ರಾಧ್ಯಾಪಕರು ತಿಳಿಸಿದ್ದಾರೆ.
ಯಾವೆಲ್ಲ ಕೋರ್ಸ್ ಲಭ್ಯ?
ಪ್ರಸಕ್ತ ವರ್ಷದಿಂದ ಮೂರು ಕೋರ್ಸ್’ಗಳನ್ನು ಆರಂಭಿಸಲಾಗಿದೆ. ಡಿಪ್ಲೋಮಾ ಇನ್ ಪೊಲೀಸ್ ಸೈನ್ಸ್ (1 ವರ್ಷ ಅವಧಿ) ಪಿಯುಸಿ (10+2) ಮುಗಿಸಿದವರು ಇದರಲ್ಲಿ ಪ್ರವೇಶ ಪಡೆಯಬಹುದು. ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಪಿಜಿ ಪೊಲೀಸ್ ಸೈನ್ಸ್ ಆ್ಯಂಡ್ ಸ್ಟ್ರಾಟರ್ಜಿಕ್ ಮ್ಯಾನೇಜ್ಮೆಂಟ್ (1 ವರ್ಷ ಅವಧಿ) ಪದವಿ ಪಡೆದವರಾಗಿರಬೇಕು. ಹಾಗೂ ಬಿಎ ಇನ್ ಸೆಕ್ಯೂರಿಟಿ ಮ್ಯಾನೇಜ್ಮೆಂಟ್ (4 ವರ್ಷ ಅವಧಿ) ಆರಂಭಿಸಲಾಗಿದೆ.
ಯಾವೆಲ್ಲ ಕ್ಷೇತ್ರಗಳಲ್ಲಿ ಬೇಡಿಕೆ?
ರಕ್ಷಾ ವಿವಿಯಲ್ಲಿರುವ ಬಹುತೇಕ ಕೋರ್ಸ್’ಗಳು ರಕ್ಷಣಾ ಇಲಾಖೆಗೆ ಸಂಬಂಧಿಸಿದ್ದು, ಅದರ ಆಧಾರಿತ ಪಠ್ಯ ಲಭ್ಯವಿದೆ. ಇಲ್ಲಿ ಅಭ್ಯರ್ಥಿಗಳು ಯಾವ ಕನಸುಗಳನ್ನು ಹೊತ್ತು ಬಂದಿದ್ದಾರೋ ಅದರ ಆಧಾರದ ಮೇಲೆ ತರಬೇತಿ ನೀಡಲಾಗುತ್ತದೆ. ಪೊಲೀಸ್ ಆಗಬೇಕೆಂದಿದ್ದರೆ ಅದಕ್ಕೆ ಪೂರಕವಾಗಿ ಸಿದ್ಧಪಡಿಸಲಾಗುತ್ತದೆ. ದೈಹಿಕವಾಗಿಯೂ ಟ್ರೈನಿಂಗ್ ಇರಲಿದೆ.
ಕೋರ್ಸ್ ಮುಗಿಸಿದವರಿಗೆ ರಕ್ಷಾ ವಿವಿಯ ಹೆಡ್ ಕ್ವಾರ್ಟರ್ ನಲ್ಲಿ ಪ್ಲೇಸ್ಮೆಂಟ್ ಸೆಂಟರ್ ಇದೆ. ಅಲ್ಲಿ ನಡೆಯುವ ಕ್ಯಾಂಪಸ್ ಇಂಟರ್ವ್ಯೂಗಳಲ್ಲೂ ಪಾಲ್ಗೊಳ್ಳುವ ಅವಕಾಶವಿದೆ. ಅದರೊಂದಿಗೆ ಸ್ಥಳೀಯ ಬೇಡಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪೊಲೀಸ್, ಸೇನೆ ಮಾತ್ರವಲ್ಲದೇ ಕಾರ್ಪೋರೆಟ್ ಮತ್ತು ಖಾಸಗಿ ಭದ್ರತೆ ಕ್ಷೇತ್ರದಲ್ಲೂ ಉದ್ಯೋಗ ಪಡೆಯಬಹುದು.
READ | ದ್ವಿತೀಯ ಪ್ರಯತ್ನದಲ್ಲೇ ಶಿವಮೊಗ್ಗದ ಐ.ಎನ್.ಮೇಘನಾ ಐಎಎಸ್ ಪಾಸ್, ಯಶಸ್ಸಿನ ಗುಟ್ಟೇನು?
ಏನೆಲ್ಲ ವಿಷಯಗಳ ಕಲಿಕೆ?
ಸೆಕ್ಯೂರಿಟಿ ಮೇಲ್ವಿಚಾರಕರು, ಭದ್ರತೆ, ಕ್ರೈಮ್ ಮ್ಯಾಪಿಂಗ್, ಪೊಲೀಸ್ ಸ್ಟ್ರಾಟರ್ಜಿ, ಅಪರಾಧ ತಡೆ, ಆಂತರಿಕ ಭದ್ರತೆ, ಕಾರ್ಪೋರೇಟ್ ಭದ್ರತೆ ಇತ್ಯಾದಿ ವಿಷಯಗಳ ಆಧಾರದಲ್ಲಿ ಪಠ್ಯಕ್ರಮ ಇರಲಿದೆ. ನಿವೃತ್ತ ಸೈನಿಕ ಮತ್ತು ಪೊಲೀಸ್ ಅಧಿಕಾರಿಗಳು, ನುರಿತರಿಂದ ಪೊಲೀಸ್ ಇಲಾಖೆಯಲ್ಲಿ ಅಗತ್ಯವಿರುವ ತರಬೇತಿಗಳನ್ನು ನೀಡಲಾಗುತ್ತದೆ. ಕಾರಾಗೃಹ, ಸೆಕ್ಯೂರಿಟಿ ಆಫಿಸರ್ ಹುದ್ದೆಗಳಿಗೂ ಬೇಡಿಕೆ ಇದ್ದು ಕೋರ್ಸ್ ಮುಗಿಸಿದವರಿಗೆ ಅಲ್ಲಿಯೂ ಮುಕ್ತ ಅವಕಾಶವಿದೆ.
ಏನೆಲ್ಲ ಸೌಲಭ್ಯ ಲಭ್ಯ?
ಕ್ರೀಡೆ, ಗ್ರಂಥಾಲಯ, ವೈಫೈ, ಆನ್ಲೈನ್ ಡೇಟಾ ಬೇಸ್
ವಿದ್ಯಾರ್ಥಿಗಳಿಗೆ ಅನುಕೂಲವಿರುವ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಕೋರ್ಸ್’ನಲ್ಲಿ ಡಿಸ್ಟಿಂಕ್ಷನ್ ಪಡೆದರೆ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುತ್ತದೆ. ಈಗಾಗಲೇ ಈ ವ್ಯವಸ್ಥೆ ದೆಹಲಿ, ಗುಜರಾತ್ ನಲ್ಲಿ ಚಾಲ್ತಿಯಲ್ಲಿದೆ.
Siddaramaiah | ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ನಿಮಗೇನು ಗೊತ್ತು? ತಿಳಿಯಬೇಕಾದ 6 ವಿಚಾರಗಳಿವು