
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಗ್ರಾಮಾಂತರ (shimoga rural) ಕ್ಷೇತ್ರದ ನೂತನವಾಗಿ ಶಾಸಕಿಯಾಗಿ ಆಯ್ಕೆಯಾದ ಶಾರದಾ ಪೂರ್ಯಾನಾಯ್ಕ್ (Sharada Puryanaik) ಅವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತಮ್ಮ ಕನಸುಗಳನ್ನು ತೋಡಿಕೊಂಡರು.
ನನ್ನ ಈ ಎಲ್ಲ ಬೆಳವಣಿಗೆಯ ಹಿಂದೆ ನನ್ನ ಪತಿ ಪೂರ್ಯಾನಾಯ್ಕ ಅವರ ಆಶೀರ್ವಾದವಿದೆ. ಅವರ ಆದರ್ಶಗಳು ನನಗೆ ಮಾದರಿಯಾಗಿವೆ. ಕ್ಷೇತ್ರದಲ್ಲಿ ಈಗಲೂ ಕೂಡ ಅವರನ್ನು ಸ್ಮರಿಸುತ್ತಾರೆ. ಜೊತೆಗೆ ಎಲ ಜಾತಿ, ಧರ್ಮ ಮತ್ತು ವರ್ಗದ ಕಾರ್ಯಕರ್ತರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಕ್ಷೇತ್ರದ ಜನರು ನನ್ನನ್ನು 15,000ಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಿದ್ದಾರೆ. ಅವರ ಪ್ರೀತಿಗೆ, ಅಭಿಮಾನಕ್ಕೆ ನನಗೆ ಹೃದಯ ತುಂಬಿ ಬಂದಿದೆ.
– ಶಾರದಾ ಪೂರ್ಯಾನಾಯ್ಕ್, ಶಾಸಕಿ, ಶಿವಮೊಗ್ಗ ಗ್ರಾಮಾಂತರ
- ಗ್ರಾಮಾಂತರ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈಗಾಗಲೇ ಒಂದೆರಡು ಹಳ್ಳಿಗಳಲ್ಲಿ ಕೊಳವೆ ಬಾವಿ ತೆಗೆಸಿ ನೀರಿನ ವ್ಯವಸ್ಥೆ ಮಾಡಿದ್ದೇನೆ. ಜೊತೆಗೆ ಸಂಪರ್ಕ ರಸ್ತೆಗಳು ಇನ್ನೂ ಆಗಬೇಕಾಗಿದೆ. ಹಾಗೆಯೇ ಅನೇಕ ಹಳ್ಳಿಗಳಲ್ಲಿ ಸ್ಮಶಾನದ ಜಾಗವಿಲ್ಲ. ಮುಸ್ಮಿಂರು ಹೆಚ್ಚಿರುವ ಒಂದೆರಡು ಕಡೆ ಶವ ಹೂಳಲು ಅವರಿಗೆ ಕಷ್ಟವಾಗುತ್ತಿದೆ. ಈ ಬಗ್ಗೆ ಗಮನಹರಿಸುತ್ತೇನೆ.
- ಹಳ್ಳಿಗಳಲ್ಲಿ ದೇವಸ್ಥಾನಗಳ ಬಗ್ಗೆ ಹೆಚ್ಚು ಒಲವಿದೆ. ಅನೇಕ ಹಳ್ಳಿಗಳಲ್ಲಿ ದೇವಸ್ಥಾನಗಳ ಪುನರುಜ್ಜೀವನಗೊಳಿಸಬೇಕಾಗಿದೆ. ಕೆಲವು ಕಡೆಗಳಲ್ಲಿ ದೇವಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆಯೂ ಗಮನಹರಿಸುವೆ.
- ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಈಗಿರುವ ಹೋಬಳಿ ಮಟ್ಟದ ಆಸ್ಪತ್ರೆಗಳನ್ನು ಉನ್ನತ ಮಟ್ಟಕ್ಕೆ ಏರಿಸಬೇಕಾಗಿದೆ.
- ಪ್ರಾಥಮಿಕ ಶಾಲೆಗಳನ್ನು ಉಳಿಸಬೇಕಾಗಿದೆ. ಮತ್ತಷ್ಟು ಅಂಗನವಾಡಿ ಶಾಲೆಗಳನ್ನು ತೆರೆಯಬೇಕು. ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ, ದೇವಾಲಯ ಈ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಮತ್ತಷ್ಟು ಆಗಬೇಕಾಗಿದೆ.
- ಬಗರ್ ಹುಕುಂ ಸಾಗುವಳಿ ಸಮಸ್ಯೆ, ಶರಾವತಿ ಸಂತ್ರಸ್ತರ ಸಮಸ್ಯೆ, ಕಿರು ನೀರಾವರಿ ಯೋಜನೆಗಳು, ರಾಜ್ಯ ಹೆದ್ದಾರಿ ಮುಂತಾದ ರಾಜ್ಯಮಟ್ಟದ ಸಮಸ್ಯೆಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಆಡಳಿತ ಪಕ್ಷದೊಂದಿಗೆ ಸಂಪರ್ಕ ಇಟ್ಟುಕೊಂಡು ಪ್ರೀತಿಯಿಂದಲೇ ಅನುದಾನಗಳನ್ನು ತಂದು ಸದನದಲ್ಲಿ ಮುಖ್ಯವಾದ ಸಮಸ್ಯೆಗಳನ್ನು ತಿಳಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವೆ.
READ | ಜೋಡಿ ಕೊಲೆ ಪ್ರಕರಣ, ಮಿಂಚಿನ ವೇಗದಲ್ಲಿ ಆರೋಪಿ ಬಂಧನ, ಕೊಲೆಗೇನು ಕಾರಣ?
ಸೋಲಿನ ಹತಾಶೆಯಿಂದ ಆರೋಪ
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾರದಾ ಪೂರ್ಯಾನಾಯ್ಕ್, ಬಿಜೆಪಿ ಅಭ್ಯರ್ಥಿ ಸೋಲಿನ ಹತಾಶೆಯಿಂದ ಹೀಗೆ ಹೇಳುತ್ತಿದ್ದಾರೆ. ಆನವೇರಿಯ ರ್ಯಾಲಿಗೆ ಸಂಬಂಧಿಸಿದಂತೆ ಅವರೇ ಕ್ಯಾತೆ ತೆಗದಿದ್ದು.ಹಾಗೆಯೇ ಜೆಡಿಎಸ್ -ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಅವರ ಆರೋಪ ಸರಿಯಲ್ಲ. ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ನನಗೇನೂ ಗೊತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಗೆ ತಮ್ಮದೇ ಆದ ಸಿದ್ಧಾಂತಗಳು ಇರುತ್ತವೆ. ಅವರು ಚುನಾವಣೆಗೆ ನಿಲ್ಲುವುದು ಹೊಂದಾಣಿಕೆ ಆಗಲಾರದು.
ಜೆಡಿಎಸ್ ಕಾರ್ಯಾಧ್ಯಕ್ಷ ಕಾಂತರಾಜ್, ಪ್ರಮುಖರಾದ ಎಚ್.ಆರ್. ಹನುಮಂತಪ್ಪ , ಸತೀಶ್ ಕಸೆಟ್ಟಿ, ದಾದಾಪೀರ್, ಗೀತಾ ಸತೀಶ್, ರೇಣುಕಾ, ಕುಮಾರ್ ನಾಯ್ಕ, ರಮೇಶ್, ಪರಶುರಾಮ್ ಯೋಗೀಶ್, ನಾಗರಾಜ್, ಸಿದ್ಲಿಪುರ ಸತೀಶ್ ಉಪಸ್ಥಿತರಿದ್ದರು.
Shimoga election Result | ಶಿವಮೊಗ್ಗದಲ್ಲಿ ಯಾರಿಗೆಲ್ಲ ಗೆಲುವು, ಎಷ್ಟು ಅಂತರ, ಇಲ್ಲಿದೆ ಕಂಪ್ಲೀಟ್ ಮಾಹಿತಿ