Shimoga Election | ಶಿವಮೊಗ್ಗದಲ್ಲಿ ಮತ ಎಣಿಕೆ ಆರಂಭ, ಶಿವಮೊಗ್ಗದಲ್ಲಿ ಯಾರಿಗೆಲ್ಲ ಮುನ್ನಡೆ?

Election updates

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಸಾರ್ವಜನಿಕರು, ಪಕ್ಷಗಳ ಕಾರ್ಯಕರ್ತರು, ಪಕ್ಷೇತರ ಅಭ್ಯರ್ಥಿಗಳು ಹಿಂಬಾಲರು ಸೇರಿದಂತೆ ನೂರಾರು ಜನ ಸೇರಿದ್ದಾರೆ.

READ | ಇಂದಿನಿಂದಲೇ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ, ಏನೆಲ್ಲ‌ ಮಾಡುವಂತಿಲ್ಲ

ಈಗಾಗಲೇ ರಾಜ್ಯದೆಲ್ಲೆಡೆ ಅಂಚೆ ಮತಗಳ ಎಣಿಕೆ ಆರಂಭವಾಗಿದ್ದು, ಇವುಗಳು ಪೂರ್ಣಗೊಂಡ ಬಳಿಕ ಇವಿಎಂ ಮತ ಎಣಿಕೆಯನ್ನು ಮಾಡಲಾಗುವುದು.
ಕಾರ್ಯಕರ್ತರಲ್ಲಿ ಉತ್ಸಾಹ ಮನೆ ಮಾಡಿದ್ದು, ಅಭ್ಯರ್ಥಿಗಳು ಟೆನ್ಶನ್’ನಲ್ಲಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪೂರ್ಯಾನಾಯ್ಕ್ ಅವರಿಗೆ ಮುನ್ನಡೆಯಾಗಿದೆ ಎಂದು ತಿಳಿದುಬಂದಿದೆ.
ಶಿವಮೊಗ್ಗದಲ್ಲಿ ಯಾರಿಗೆಲ್ಲ ಮುನ್ನಡೆ
ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್, ಸಾಗರದಲ್ಲಿ ಹರತಾಳು ಹಾಲಪ್ಪ, ಸೊರಬದಲ್ಲಿ ಮಧು ಬಂಗಾರಪ್ಪ, ಭದ್ರಾವತಿಯಲ್ಲಿ ಶಾರದಾ ಅಪ್ಪಾಜಿಗೌಡ, ಶಿವಮೊಗ್ಗ ನಗರದ ಕ್ಷೇತ್ರದಲ್ಲಿ ಆಯನೂರು ಮಂಜುನಾಥ್, ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ಅವರು ಅಂಚೆ ಮತದಲ್ಲಿ ಮುನ್ನಡೆ ಸಾಧಿಸಿದ್ದಾರೆ.

Counting | ಬೆಳ್ಳಂಬೆಳಗ್ಗೆಯಿಂದಲೇ ಶುರುವಾಯ್ತು ಮತ ಎಣಿಕೆ ಬಿಸಿ, ಸಹ್ಯಾದ್ರಿ ಕಾಲೇಜು ಸುತ್ತ ಪೊಲೀಸ್ ಸರ್ಪಗಾವಲು, ಹೇಗಿದೆ ಸ್ಥಿತಿ?

error: Content is protected !!