Narendra Modi | ಶಿವಮೊಗ್ಗಕ್ಕೆ ಆಗಮಿಸಿದ ಮೋದಿಗೆ ನೀಡಿದ ಮೂರ್ತಿ ಯಾರದ್ದು, ಏನು ಅದರ ಮರ್ಮ?

Narendra modi

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾ ಬಿಜೆಪಿಯಿಂದ ಆಯನೂರಿನಲ್ಲಿ ಆಯೋಜಿಸಿದ್ದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬಜರಂಗಿ(Bajarangi)ಯ ಮೂರ್ತಿಯನ್ನು ನೀಡಲಾಯಿತು. ಇದರೊಂದಿಗೆ ವಿಶಿಷ್ಟವಾದ ಟೋಪಿಯನ್ನು ಸಹ ನೀಡಲಾಯಿತು.
ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ‘ಬಜರಂಗ ದಳ’ ನಿಷೇಧ ಮಾಡುವ ಬಗ್ಗೆ ಘೋಷಣೆ ಮಾಡಿದ್ದು, ಅದರ ಪೂರ್ಣ ಲಾಭವನ್ನು ಬಿಜೆಪಿ ಪಡೆಯುತ್ತಿದೆ.

READ | ಶಿವಮೊಗ್ಗದಲ್ಲಿ‌ ಎಷ್ಟು ಜನ ಮನೆಯಿಂದ ಮತ ಚಲಾಯಿಸಿದ್ದಾರೆ? 

ಸಮಾವೇಶದಲ್ಲಿ ಬಜರಂಗಿ (Lord Hanuman)ಯ ಸಿನಿಮಾ ಹಾಡುಗಳನ್ನು ಹಾಕಲಾಯಿತು‌. ಮೋದಿ ಅವರಿಗೂ ಹನುಮ ಮೂರ್ತಿಯನ್ನೇ ಕೊಡುಗೆಯಾಗಿ‌ ನೀಡಲಾಗಿದೆ. ಶಾಸಕ ಕೆ.ಎಸ್.ಈಶ್ವರಪ್ಪ ಸಹ ತಮ್ಮ ಭಾಷಣದಲ್ಲಿ “ರಾವಣ ಹನುಮಂತನ ಬಾಲಕ್ಕೆ ಇಟ್ಟಿದ್ದರಿಂದಲೇ ರಾಜ್ಯ ಕಳೆದುಕೊಂಡ. ರಾಜ್ಯದಲ್ಲಿ ಕರ್ನಾಟಕಕ್ಕೂ ಇದೇ ಸ್ಥಿತಿ ಬರಲಿದೆ” ಎಂದು ಭವಿಷ್ಯ ನುಡಿದಿದ್ದಾರೆ. ಮೋದಿ ಸಹ ತಮ್ಮ ಭಾಷಣ ಆರಂಭದಲ್ಲೇ “ಜೈ ಬಜರಂಗ ಬಲಿ” ಎಂಬ ಘೋಷಣೆ ಕೂಗಿದ್ದರು. ಒಟ್ಟಾರೆ ಸಮಾವೇಶದಲ್ಲಿ ಬಜರಂಗಿ ಆದ್ಯತೆ ವಿಷಯವಾಗಿತ್ತು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕ‌‌ ಕೆ.ಎಸ್.ಈಶ್ವರಪ್ಪ, ಶಾಸಕರಾದ ಡಿ.ಎಸ್.ಅರುಣ್, ರುದ್ರೇಗೌಡ, ಸಂಸದ ಬಿ.ವೈ.ರಾಘವೇಂದ್ರ, ಪಕ್ಷದ ಅಭ್ಯರ್ಥಿಗಳಾದ ಮಂಗೋಟೆ ರುದ್ರೇಶ್, ಚನ್ನಬಸಪ್ಪ(ಚನ್ನಿ), ಆರಗ ಜ್ಞಾನೇಂದ್ರ, ಹಾಲಪ್ಪ, ಕುಮಾರ ಬಂಗಾರಪ್ಪ, ಬಿ.ವೈ.ವಿಜಯೇಂದ್ರ,‌ ಜೀವರಾಜ್ ಸೇರಿದಂತೆ ಪಕ್ಷದ ಪ್ರಮುಖರು‌ ಉಪಸ್ಥಿತರಿದ್ದರು.

Section 144 | ಶಿವಮೊಗ್ಗದಲ್ಲಿ ಎರಡು ದಿನ ನಿಷೇದಾಜ್ಞೆ, ಏನೆಲ್ಲ ಷರತ್ತುಗಳನ್ನು ವಿಧಿಸಲಾಗಿದೆ?

error: Content is protected !!