Assembly election | ಮದ್ಯ ಸೇವಿಸಿ ಚುನಾವಣೆ ಕರ್ತವ್ಯಕ್ಕೆ ಹಾಜರು, ಕೆಲವೇ ಗಂಟೆಗಳಲ್ಲಿ ಹೊರಬಿತ್ತು ಡಿಸಿ ಆದೇಶ

DC Election

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGGA: ಮಸ್ಟರಿಂಗ್ ಕೇಂದ್ರಕ್ಕೆ ಮದ್ಯಪಾನ ಮಾಡಿ ಆಗಮಿಸಿದ ಇಬ್ಬರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr.R.Selvamani) ಮಂಗಳವಾರ ಆದೇಶಿಸಿದ್ದಾರೆ.
ಎಚ್.ಎಸ್.ರುದ್ರಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ವೇಳೆ ಮದ್ಯ ಸೇವನೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ತಪಾಸಣೆಗೆಂದು ಕಳುಹಿಸಲಾಗಿತ್ತು.

READ | ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಸೇರಿ 36 ಜನರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

ಯಾರಿಗೆ ಅಮಾನತು?
ಸೊರಬ ತಾಲೂಕು ಹುರುಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎನ್.ಮಾಲತೇಶ್ ಮತ್ತು ಭದ್ರಾವತಿಯ ತೋಟಗಾರಿಕೆ ಇಲಾಖೆ ತೋಟಗಾರಿಕೆ ಸಹಾಯಕ ಬಿ.ರಮೇಶ್ ಅವರನ್ನು ಅಮಾನತು ಮಾಡಲಾಗಿದೆ.
ಎಲ್ಲೆಲ್ಲಿ ಮಸ್ಟರಿಂಗ್, ಡಿಮಸ್ಟರಿಂಗ್?
ಶಿವಮೊಗ್ಗ ಗ್ರಾಮಾಂತರ -111 ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಎಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮತ್ತು ಎಸ್.ಆರ್.ನಾಗಪ್ಪಶೆಟ್ರಿ ಸ್ಮರಕ ರಾಷ್ಟ್ರೀಯ ಅನ್ವಯಿಕ ಸೈನ್ಸ್ ಪಿಯು ಕಾಲೇಜ್, ಶಿವಮೊಗ್ಗ. ಭದ್ರಾವತಿ-112 ಸಂಚಿ ಹೊನ್ನಮ್ಮ ಬಾಲಿಕ ಪಪೂ ಕಾಲೇಜು ಭದ್ರಾವತಿ. ಶಿವಮೊಗ್ಗ-113 ಸಹ್ಯಾದ್ರಿ ವಾಣಿಜ್ಯ ಕಾಲೇಜ್ ಶಿವಮೊಗ್ಗ. ತೀರ್ಥಹಳ್ಳಿ-114 ಡಾ.ಯು.ಆರ್ ಅನಂತ ಮೂರ್ತಿ ಕಾಲೇಜು ತೀರ್ಥಹಳ್ಳಿ. ಶಿಕಾರಿಪುರ-115 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ. ಸೊರಬ-116 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೊರಬ. ಸಾಗರ-117 ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರ. ಇಲ್ಲಿ ಮಂಗಳವಾರ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಮಾಡಲಾಯಿತು. ಮತ ಎಣಿಕೆಯು ಮೇ 13ರಂದು ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯಲಿದೆ.

SSLC Result | ರಾಜ್ಯದ ಟಾಪರ್ ಪಟ್ಟಿಯಲ್ಲಿ ತೀರ್ಥಹಳ್ಳಿ ವಿದ್ಯಾರ್ಥಿ, ಅಪ್ಪ-ಅಮ್ಮ ಇಬ್ಬರೂ ಟೀಚರ್

error: Content is protected !!