ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಶಿವಮೊಗ್ಗದ ಕೆಲವು ಕ್ಷೇತ್ರಗಳಲ್ಲಿ ಮತದಾರ ಪ್ರಭು ತನ್ನ ತೀರ್ಪು ನೀಡಿಯಾಗಿದೆ. ಹಾಲಿ ಶಾಸಕರನ್ನೂ ಸೋಲಿನ ರುಚಿ ಕಾಣುವಂತೆ ಮಾಡಿದ್ದು, ಅಚ್ಚರಿಯಾಗಿ ಕೆಲವೆಡೆ ಕಾಂಗ್ರೆಸ್ ಜಯಗಳಿಸಿವೆ.
READ | ಅಡಿಕೆ ದರದಲ್ಲಿ ಮತ್ತೆ ಏರಿಕೆ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ರೇಟ್?
ಶಿಕಾರಿಪುರ ಕ್ಷೇತ್ರ- ಯಡಿಯೂರಪ್ಪ ಅವರಿಗೆ ರಾಜಕೀಯವಾಗಿ ಜನ್ಮ ನೀಡಿದ ಶಿಕಾರಿಪುರ ಕ್ಷೇತ್ರದಲ್ಲಿ ಅವರ ಪುತ್ರ ಬಿ.ವೈ.ವಿಜಯೇಂದ್ರ 81,810 ಮತಗಳ ಪಡೆದು 11,008 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸಮೀಪದ ಪಕ್ಷೇತರ ಸ್ಪರ್ಧಿ ಎಸ್.ಪಿ.ನಾಗರಾಜಗೌಡ 70,802 ಮತಗಳನ್ನು ಗಳಿಸಿದ್ದಾರೆ.
ಶಿವಮೊಗ್ಗ ನಗರ- ಬಿಜೆಪಿಯ ಚನ್ನಬಸಪ್ಪ (ಚನ್ನಿ) 96,490 ಮತಗಳನ್ನು ಗಳಿಸಿದ್ದಾರೆ. ಸಮೀಪ ಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಯೋಗೇಶ್ 68,861 ಮತಗಳನ್ನು ಪಡೆದಿದ್ದಾರೆ. ಚನ್ನಿ ಅವರು 27,674 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಸಾಗರ- ಕಾಂಗ್ರೆಸ್ಸಿನ ಗೋಪಾಲಕೃಷ್ಣ ಬೇಳೂರು 88,988 ಹಾಗೂ ಬಿಜೆಪಿಯ ಹಾಲಪ್ಪ 72,966 ಮತಗಳನ್ನು ಪಡೆದಿದ್ದು, 16,022 ಮತಗಳ ಅಂತರದಿಂದ ಬೇಳೂರು ಗೆದ್ದಿದ್ದಾರೆ.
ಸೊರಬ- ಬಿಜೆಪಿ ಕುಮಾರ ಬಂಗಾರಪ್ಪ 54,650 ಹಾಗೂ ಕಾಂಗ್ರೆಸ್ನ ಮಧು ಬಂಗಾರಪ್ಪ 98,912 ಮತಗಳನ್ನು ಗಳಿಸಿದ್ದಾರೆ. ಮಧು ಅವರು 42,262 ಮತಗಳ ಅಂತರದಿಂದ ಗೆದ್ದಿದ್ದಾರೆ.
ಭದ್ರಾವತಿ- ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ 66,208 ಮತಗಳನ್ನು ಪಡೆದು ಗೆದ್ದಿದ್ದಾರೆ. ಸಮೀಪ ಸ್ಪರ್ಧಿ ಜೆಡಿಎಸ್ ನ ಶಾರದಾ ಅಪ್ಪಾಜಿಗೌಡ 66,208 ಮತ ಗಳಿಸಿದ್ದಾರೆ. 2,705 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ತೀರ್ಥಹಳ್ಳಿ- ಬಿಜೆಪಿಯ ಆರಗ ಜ್ಞಾನೇಂದ್ರ 84,563 ಮತ ಪಡೆದಿದ್ದು, ಕಾಂಗ್ರೆಸ್ಸಿನ ಕಿಮ್ಮನೆ ರತ್ನಾಕರ್ ಅವರು 72,322 ಮತ ಗಳಿಸಿದ್ದಾರೆ. 12,241 ಮತಗಳ ಅಂತರದಿಂದ ಆರಗ ಗೆಲುವು ಸಾಧಿಸಿದ್ದಾರೆ.
ಶಿವಮೊಗ್ಗ ಗ್ರಾಮಾಂತರ– ಜೆಡಿಎಸ್ ನ ಶಾರದಾ ಪೂರ್ಯಾನಾಯ್ಕ್ 86,340, ಬಿಜೆಪಿಯ ಅಶೋಕ್ ನಾಯ್ಕ್ 71,198 ಮತಗಳನ್ನು ಪಡೆದಿದ್ದಾರೆ. 15,142 ಮತಗಳ ಅಂತರದಿಂದ ಶಾರದಾ ಅವರು ಜಯಗಳಿಸಿದ್ದಾರೆ.
Shimoga assembly constituency | ಶಿವಮೊಗ್ಗ ನಗರ ಹೈ ಓಲ್ಟೇಜ್ ಕ್ಷೇತ್ರದಲ್ಲಿ ಕಾರ್ಪೋರೇಟರ್’ಗಳ ಕಾಳಗ