Counting | ಬೆಳ್ಳಂಬೆಳಗ್ಗೆಯಿಂದಲೇ ಶುರುವಾಯ್ತು ಮತ ಎಣಿಕೆ ಬಿಸಿ, ಸಹ್ಯಾದ್ರಿ ಕಾಲೇಜು ಸುತ್ತ ಪೊಲೀಸ್ ಸರ್ಪಗಾವಲು, ಹೇಗಿದೆ ಸ್ಥಿತಿ?

Sahyadri collegee road

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ. ಆದರೆ, ಅದರ ಬಿಸಿ ಈಗಾಗಲೇ ಶುರುವಾಗಿದೆ.
ಈಗಾಗಲೇ ಜಿಲ್ಲಾಡಳಿತ ನೀಡಿರುವ ಸೂಚನೆಯಂತೆ ಬೆಳಗ್ಗೆ 6.30ರಿಂದಲೇ ಸಹ್ಯಾದ್ರಿ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಎಲ್ಲೆಲ್ಲೂ ಪೊಲೀಸ್ ಸರ್ಪಗಾವಲಿದ್ದು, ಯಾವುದೇ ವಾಹನಗಳ ಸಂಚಾರಕ್ಕೂ ಅವಕಾಶ ನೀಡುತ್ತಿಲ್ಲ.

Sahyadri college road election
ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ರಸ್ತೆಯಲ್ಲಿ ಬ್ಯಾರಿಕೆಡ್ ಅಳವಡಿಕೆ

READ | ಇಂದಿನಿಂದಲೇ ಶಿವಮೊಗ್ಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ, ಏನೆಲ್ಲ‌ ಮಾಡುವಂತಿಲ್ಲ

ಹೊಳೆ ದಾಟಿದ ಬಳಿಕವೇ ಬ್ಯಾರಿಕೆಡ್ ಗಳನ್ನು ಹಾಕಲಾಗಿದ್ದು, ಬೈಕ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ದೊಡ್ಡ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
ಸಹ್ಯಾದ್ರಿ ಕಾಲೇಜು ಸುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದು, ವಿಜ್ಞಾನ ಕಾಲೇಜಿನಲ್ಲಿ ಚುನಾವಣೆ ಕರ್ತವ್ಯದ ಮೇಲಿರುವ ಸಿಬ್ಬಂದಿಗೆ ವಾಹನಗಳ ಪಾರ್ಕಿಂಗ್ ಗೆ ಅವಕಾಶ ನೀಡಲಾಗಿದೆ.
ಬೆಳಗ್ಗೆ 8ರಿಂದ ಮತ ಎಣಿಕೆ ಆರಂಭವಾಗುವುದರಿಂದ ಗಂಟೆ ಏಳಾದರೂ ಯಾವುದೇ ಪಕ್ಷಗಳ ಕಾರ್ಯಕರ್ತರು ಕಾಲೇಜು ಸುತ್ತ ಸುಳಿದಾಡುತ್ತಿರಲಿಲ್ಲ. ಆದರೆ, 8ರ ಬಳಿಕ ಈ ಭಾಗ ಸಂಪೂರ್ಣ ವಾಹನಗಳ ಸಂಚಾರಕ್ಕೆ ನಿಷೇಧವಾಗಲಿದ್ದು, ಜನಜಂಗುಳಿ ಸೇರುವ ಸಾಧ್ಯತೆ ಇದೆ. ಹೀಗಾಗಿ, ಪೊಲೀಸ್ ಇಲಾಖೆ ಸಹ ಎಲ್ಲ ರೀತಿಯ ಪೂರ್ವ ತಯಾರಿಗಳನ್ನು ಮಾಡಿಕೊಂಡಿದೆ.

Counting center | ನಾಳೆ‌ ಮತ ಎಣಿಕೆ, ‌ಕೇಂದ್ರದೊಳಗೆ ಏನೆಲ್ಲ‌ ತರುವುದಕ್ಕೆ ನಿಷೇಧ?

error: Content is protected !!