ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಎಸ್.ಎಸ್.ಎಲ್.ಸಿ ಫಲಿತಾಂಶ (SSLC Result 2023) ಪ್ರಕಟವಾಗಿದ್ದು, ಶಿವಮೊಗ್ಗ (shimoga) ಜಿಲ್ಲೆಯು 29 ನೇ ಸ್ಥಾನ ಪಡೆದಿದೆ. ಕಳೆದ ವರ್ಷ 26ನೇ ಸ್ಥಾನದಲ್ಲಿತ್ತು.
2023ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಚಿತ್ರದುರ್ಗ (Chitradurga) ಜಿಲ್ಲೆಯು ಶೇ.96.8ರಷ್ಟ ಫಲಿತಾಂಶ ಪಡೆದು ಮೊದಲನೇ ಸ್ಥಾನ ಪಡೆದಿದೆ. ಎರಡನೇ ಸ್ಥಾನದಲ್ಲಿ ಮಂಡ್ಯ (Mandya) 96.74 ಪಡೆದಿದೆ. ಶೇ.75.49 ಫಲಿತಾಂಶ ಪಡೆದಿರುವ ಯಾದಗಿರಿ (Yadagiri) 35ನೇ ಸ್ಥಾನದಲ್ಲಿದೆ.
ಜಿಲ್ಲೆಯಲ್ಲೇ ತೀರ್ಥಹಳ್ಳಿ ಟಾಪ್
ಜಿಲ್ಲೆಯಲ್ಲಿ ತೀರ್ಥಹಳ್ಳಿ (Thirthahalli) ತಾಲೂಕು ಶೇ.91.30 ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದೆ. ಹೊಸನಗರ (Hosanagar) ಶೇ.91.07, ಸಾಗರ (sagar) ಶೇ.86.27, ಶಿವಮೊಗ್ಗ ಶೇ.85.10, ಸೊರಬ (sorab) ಶೇ. 85.01, ಶಿಕಾರಿಪುರ (shikaripura) ಶೇ.81.49, ಭದ್ರಾವತಿ (Bhadravathi) ಶೇ. 76.79 ಫಲಿತಾಂಶ ಗಳಿಸಿದೆ. ಜಿಲ್ಲೆಯಲ್ಲಿ ಯಾವುದೇ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿಲ್ಲ.
2023ನೇ ಸಾಲಿನ ಪರೀಕ್ಷೆಯಲ್ಲಿ 21,150 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17,779 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ರಾಜ್ಯದಲ್ಲಿ ಫಲಿತಾಂಶ ಇಳಿಕೆ
ಒಟ್ಟು 8,35,102 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 7,00,619 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಒಟ್ಟಾರೆ ಉತ್ತೀರ್ಣ ಶೇ.83.89 ರಷ್ಟಿದೆ. 2022 ರಲ್ಲಿ ಎಸ್.ಎಸ್.ಎಲ್.ಸಿ ಒಟ್ಟು ತೇರ್ಗಡೆಯ ಶೇ.85.63 ಆಗಿತ್ತು. 2021ರಲ್ಲಿ ದಾಖಲಾದ 99.99 ಶೇಕಡಾವನ್ನು ಹೊರತುಪಡಿಸಿ, ಸಾಂಕ್ರಾಮಿಕ ರೋಗದಿಂದಾಗಿ ಎಲ್ಲ ವಿದ್ಯಾರ್ಥಿಗಳು 2021ರಲ್ಲಿ ಉತ್ತೀರ್ಣರಾಗಿದ್ದರು.
ನಾಲ್ಕು ವಿದ್ಯಾರ್ಥಿಗಳಿಗೆ 625 ಅಂಕ
- ಭೂವಿಕಾ ಪೈ, ನ್ಯೂ ಮೆಕಲೆ ಇಂಗ್ಲಿಷ್ ಶಾಲೆ ಹೂಸೂರು ರೋಡ್, ಬೆಂಗಳೂರು.
- ಯಶಸ್ ಗೌಡ, ಬಾಲಗಂಗಾಧರನಾಥ ಹೈಸ್ಕೂಲ್, ಚಿಕ್ಕಬಳ್ಳಾಪುರ.
ಅನುಪಮಾ ಶ್ರೀಶೈಲ- ಕುಮಾರೇಶ್ವರ ಶಾಲೆ ಸವದತ್ತಿ. - ಭೀಮನಗೌಡ ಹನುಮಂತಗೌಡ ಪಾಟೀಲ್, ಆಕ್ಸ್ ಫರ್ಡ್ ಇಂಗ್ಲೀಷ್ ಶಾಲೆ, ಮುದ್ದೇಬಿಹಾಳ. 625 ಕ್ಕೆ 625 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
- ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಪ್ರಜ್ಞಾಭಾರತಿ ಆಂಗ್ಲ ಮಾಧ್ಯಮ ಶಾಲೆಯ ಎಚ್.ಎಸ್.ಅಮಿತ್ ಶಾಸ್ತ್ರಿ 624 ಅಂಕ ಗಳಿಸಿ ರಾಜ್ಯದ ಟಾಪರ್ ಆಗಿದ್ದಾರೆ.
Narendra Modi | ಶಿವಮೊಗ್ಗಕ್ಕೆ ಆಗಮಿಸಿದ ಮೋದಿಗೆ ನೀಡಿದ ಮೂರ್ತಿ ಯಾರದ್ದು, ಏನು ಅದರ ಮರ್ಮ?