COTPA Case | ಶಿವಮೊಗ್ಗದಲ್ಲಿ ಒಂದೇ ದಿನ 1,587 ಕೇಸ್ ದಾಖಲು, ಕಾರಣವೇನು?

cigarette

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಾದ್ಯಂತ ಒಂದೇ ದಿನ 1587 ಕೋಟ್ಪಾ ಪ್ರಕರಣಗಳನ್ನು ದಾಖಲಿಸಲಾಗಿದೆ.
ವಿಶ್ವ ತಂಬಾಕು ವಿರೋಧಿ ದಿನದ (World No Tobacco Day) ಅಂಗವಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪೆಟ್ಟಿ ಅಂಗಡಿ, ಜೆರಾಕ್ಸ್ ಅಂಗಡಿ ಮತ್ತು ಬೇಕರಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.

READ | ತಮಿಳುನಾಡು ಮೂಲದ ವ್ಯಕ್ತಿ ಶಿವಮೊಗ್ಗದಲ್ಲಿ ಸಾವು, ಕಾರಣವೇನು?

ಎಲ್ಲಿ ಎಷ್ಟು ಕೇಸ್?
ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯಲ್ಲಿ 273, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯಲ್ಲಿ 238, ಸಾಗರ ಉಪ ವಿಭಾಗ ವ್ಯಾಪ್ತಿಯಲ್ಲಿ 374, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯಲ್ಲಿ 81, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯಲ್ಲಿ 351 ಮತ್ತು ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯಲ್ಲಿ 270 ಸೇರಿ ಜಿಲ್ಲೆಯಾದ್ಯಂತ ಒಟ್ಟು 1,587 ಕೋಟ್ಪಾ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.

Good News | ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ 5 ಇ-ಬಸ್‍ಗಳ ಸಂಚಾರ ಪ್ರಾರಂಭ, ಎಷ್ಟಿದೆ‌ ರೇಟ್?

error: Content is protected !!