
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭತ್ತದ ಪಿಂಡಿ ಮಾಡುವ ಯಂತ್ರದಲ್ಲಿ ಕತ್ತು ಸಿಲುಕಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಬುಧವಾರ ಮೃತಪಟ್ಟಿದ್ದಾನೆ.
ತಮಿಳುನಾಡಿನ ಸೂರ್ಯ(23) ಎಂಬಾತ ಮೃತಪಟ್ಟಿದ್ದಾನೆ. ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿರುವ ಟೊಯೋಟಾ ಶೋರೂಂ ಹಿಂಭಾಗದ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಪಿಂಡಿ ಮಾಡುವುದಕ್ಕಾಗಿ ಯಂತ್ರ ತಂದಿದ್ದು, ಸೂರ್ಯ ಕೆಲಸ ಮಾಡುತ್ತಿದ್ದ ಎಂದು ಮಾಹಿತಿ ತಿಳಿದುಬಂದಿದೆ.
READ | ಕ್ರೈಂ ಕಂಟ್ರೋಲ್’ಗೆ ಪೊಲೀಸ್ ಇಲಾಖೆ ಮಾಸ್ಟರ್ ಪ್ಲ್ಯಾನ್, ಇಲ್ಲಿವೆ ಪಂಚ ಸೂತ್ರ
ಹುಲ್ಲು ತೆಗೆಯಲು ಇಣುಕಿದಾಗ ಘಟನೆ
ಯಂತ್ರದಲ್ಲಿ ಹುಲ್ಲು ಸಿಲುಕಿದ್ದು, ಅದನ್ನು ತೆಗೆಯುವುದಕ್ಕೆಂದು ಒಳಗೆ ಇಣುಕಿದಾಗ ಯಂತ್ರದೊಳಗೆ ಕುತ್ತಿಗೆ ಭಾಗ ಸಿಲುಕಿದೆ. ಯಂತದಿಂದ ಹೊರತೆಗೆಯುವುದಕ್ಕೆ ಅಲ್ಲಿ ಯಾರೂ ಇಲ್ಲದ್ದಕ್ಕೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.