Threat | ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಗೆ ಚಾಕುವಿನಿಂದ ಬೆದರಿಸಿದ ವ್ಯಕ್ತಿ ಅಂದರ್, ಪರಸ್ಪರ ಆರೋಪಗಳೇನು?

Crime news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಯೂನಿಯನ್ ಬ್ಯಾಂಕ್ (union bank of India) ಮ್ಯಾನೇಜರ್ ಗೆ ಚಾಕುವಿನಿಂದ ಬೆದರಿಸಿದ ಘಟನೆ ಹೊಸಳ್ಳಿ ಶಾಖೆಯಲ್ಲಿ ನಡೆದಿದೆ.
ಘಟನೆ ಸಂಬಂಧಿಸಿದಂತೆ ಚಾಕುವಿನಿಂದ ಬೆದರಿಸಿದ ಆರೋಪಿ ರೇವು ನಾಯ್ಕ್ ಎಂಬುವರನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

READ | ಖಾಸಗಿ ಕಾಲೇಜು ಪ್ರಾಂಶುಪಾಲರಿಗೆ ಜಾಮೀನು ನಿರಾಕರಣೆ, ಸಾಗರದಲ್ಲಿ ಕಿಶೋರ ಕಾರ್ಮಿಕ ಪತ್ತೆ

ಆರೋಪಗಳೇನು?
“ದನ ಖರೀದಿಗೆ ಸಾಲ‌ ಕೊಡುವಂತೆ ಬ್ಯಾಂಕಿನಲ್ಲಿ ಮನವಿ ಮಾಡುತ್ತಲೇ ಇದ್ದೇನೆ.‌ ಆದರೆ, ನೀಡಿಲ್ಲ” ಎಂದು ಆರೋಪಿ ರೇವು ನಾಯ್ಕ್ ಆರೋಪಿಸಿದ್ದಾರೆ.
ಬ್ಯಾಂಕಿನವರು ಹೇಳುವಂತೆ, “ಸಾಲ ನೀಡುವಂತೆ ಈ ವ್ಯಕ್ತಿಯು ಬ್ಯಾಂಕಿಗೆ ಬಂದಿಲ್ಲ” ಎಂದಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ನಡೆದಿದೆ.

error: Content is protected !!