Drama | ‘ನಿರಾಕರಣೆ’ ಏಕವ್ಯಕ್ತಿ ನಾಟಕ ಪ್ರದರ್ಶನ, ಈ ರಂಗಪ್ರಯೋಗದ್ದೇನು ವಿಶೇಷ?

Nataka Drama

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಹೊಂಗಿರಣ (Hongirana) ಸಂಸ್ಥೆ ವತಿಯಿಂದ ಸೆ.3ರಂದು ಸಂಜೆ 6-45ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ‘ನಿರಾಕರಣೆ’ (Nirakarane) ಎಂಬ ಏಕವ್ಯಕ್ತಿ ರಂಗಪ್ರಯೋಗ (One man show) ವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಹಾಗೂ ರಂಗಕರ್ಮಿ ಚಂದ್ರಶೇಖರ ಶಾಸ್ತ್ರಿ (Chandrasekhar Shastri) ಹೇಳಿದರು.

Hongirana

READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ‌ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ, ಪ್ರಮುಖ ಘೋಷಣೆ ಏನು?

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಲೇಖಕಿ ವೀಣಾ ಶಾಂತೇಶ್ವರ ಅವರ ಕಥೆಯನ್ನು ಆಧರಿಸಿದ ನಿರಾಕರಣೆ ಎಂಬ ರಂಗರೂಪವನ್ನು ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದಾರೆ. ಭಾರತೀಯ ಕಾವ್ಯ ಪುರಾಣಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಬಹಳ ಮುಖ್ಯವಾಗಿದ್ದರೂ ಕೂಡ ಅಲ್ಲಿಂದ ಇಲ್ಲಿಯವರೆಗೆ ಶೋಷಣೆಯ ವಿರುದ್ಧ ಪ್ರತಿಭಟಿಸುವ ಶಕ್ತಿಯನ್ನು ನಾವ್ಯಾರೂ ಗಳಿಸಿಕೊಂಡಿಲ್ಲ. ಇದನ್ನೇ ಮುಖ್ಯವಾಗಿಟ್ಟುಕೊಂಡು ಪ್ರಸ್ತುತ ನಾಟಕದಲ್ಲಿ ಬರುವ ದುಶ್ಯಂತ ಹಾಗೂ ಶಕಟೂರ್ನಮೆಂಟ್, ಗೆಯನ್ನು ವಾಸ್ತವಿಕ ನೆಲೆಯಲ್ಲಿ ನೋಡುವ ರೀತಿಯೇ ಈ ರಂಗಪ್ರಯೋಗವಾಗಿದೆ ಎಂದರು.
ಹೊAಗಿರಣ ಸಂಸ್ಥೆಯು ಈಗಾಗಲೇ ಹಲವಾರು ನಾಟಕಗಳನ್ನು ಪ್ರದರ್ಶಿಸಿದೆ, ಪ್ರಶಸ್ತಿಗಳನ್ನು ಪಡೆದಿದೆ. ಈಗ ಏಕವ್ಯಕ್ತಿ ರಂಗಪ್ರಯೋಗವನ್ನು ಮಾಡುತ್ತಿದೆ. ಇದರ ಪ್ರಮುಖ ಪಾತ್ರಧಾರಿ ಶ್ರುತಿ ಆದರ್ಶ್ ಆಗಿದ್ದು ಇವರು ರಂಗಭೂಮಿಯಲ್ಲಿ ಅಪಾರ ಆಸಕ್ತಿ ವಹಿಸಿದ್ದರೂ ಕೂಡ ಅವಕಾಶಗಳು ಸಿಕ್ಕಿರಲಿಲ್ಲ. ಇದು ಅವರ ಮೊದಲ ಪ್ರವೇಶವಾಗಿದೆ. ಇವರಿಂದ ಬಹಳಷ್ಟು ನಿರೀಕ್ಷೆ ಇದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಗೀತ ನಿರ್ದೇಶಕ ಗಣೇಶ್ ರಾವ್ ಎಲ್ಲೂರು, ಗಣೇಶ್ ಸಹ್ಯಾದ್ರಿ, ಗಿರಿಧರ್, ನಟಿ ಕಲಾವಿದೆ ಶ್ರುತಿ ಆದರ್ಶ್ ಇದ್ದರು.

Forest amendment bill | ಅರಣ್ಯಕ್ಕೆ ಅಪಾಯ ತರಲಿದೆ ‘ಅರಣ್ಯ ಕಾಯ್ದೆ ತಿದ್ದುಪಡಿ ಮಸೂದೆ’, ಆಕ್ಷೇಪಣೆ ಸಲ್ಲಿಕೆಗೇನು ಕಾರಣ?

error: Content is protected !!