Karnataka Bandh | ಕರ್ನಾಟಕ ಬಂದ್’ಗೆ ಶಿವಮೊಗ್ಗದಲ್ಲಿ ನೋ ರೆಸ್ಪಾನ್ಸ್, ಕನ್ನಡಪರ ಸಂಘಟನೆಯವರು ಅರೆಸ್ಟ್, ಹೇಗಿದೆ ಸ್ಥಿತಿ?

Karnataka bandha

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಾವೇರಿ ನೀರು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ಶುಕ್ರವಾರ ಬಂದ್’ಗೆ‌ ಕರೆ‌ ನೀಡಲಾಗಿತ್ತು. ಅದಕ್ಕೆ ಪೂರಕವಾಗಿ ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಯಿತು.

READ |  ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಫೋಟೊ ಆಲ್ಬಂ, ಶಿವಮೊಗ್ಗ ಶೃಂಗಾರಕ್ಕೆ ಜನ ಫಿದಾ

ಕನ್ನಡಪರ‌ ಸಂಘಟನೆಯವರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ‌ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದಾಗ ಕನ್ನಡಪರ‌ ಸಂಘಟನೆಯ ಕಾರ್ಯಕರ್ತರು, ಮುಖಂಡರನ್ನು ಬಂಧಿಸಲಾಯಿತು.
ತದನಂತರ ಬೇರೆ ಕನ್ನಡಪರ ಸಂಘಟನೆಯವರು ಖಾಸಗಿ‌ಬಸ್ ನಿಲ್ದಾಣದಿಂದ ಬಿಎಚ್.ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದರು.
ಶಿವಮೊಗ್ಗದಲ್ಲಿ ಶಾಂತಿಯುತ ಪ್ರತಿಭಟನೆ
ಕರ್ನಾಟಕ ಬಂದ್’ಗೆ ಕರೆ ನೀಡಿದರೂ ಶಿವಮೊಗ್ಗದಲ್ಲಿ ಬಂದ್ ವಾತಾವರಣ ಇಲ್ಲ. ಬಸ್, ಆಟೋ‌ ಮತ್ತು ವಾಹನಗಳ ಸಂಚಾರ ನಡುವೆ ನಿತ್ಯದಂತ್ತಿತ್ತು. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೂ ತೊಂದರೆ ಆಗಿಲ್ಲ. ಕೆಲವು ಶಾಲೆ ಕಾಲೇಜುಗಳ ಹೊರತು  ಇನ್ನುಳಿದವುಗಳಿಗೆ ರಜೆ ನೀಡಿಲ್ಲ.

error: Content is protected !!