Special Train | ಗಣೇಶ ಚತುರ್ಥಿ ಹಿನ್ನೆಲೆ ವಿಶೇಷ ರೈಲುಗಳು ಆರಂಭ, ಏನಿದೆ ವೇಳಾಪಟ್ಟಿ?

Train

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಗಣೇಶ ಚತುರ್ಥಿ ಹಬ್ಬ (Ganesh chathurthi festival)ದ ಸಂದರ್ಭದಲ್ಲಿ ಸಾರ್ವಜನಿಕರ ಬೇಡಿಕೆ ಮೇರೆಗೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರ (yasgwanathpur) ಮತ್ತು ಬೆಳಗಾವಿ (Belagavi railway station) ನಿಲ್ದಾಣಗಳ ನಡುವೆ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ.

READ | ರಾಜ್ಯದಲ್ಲೇ ಮೊದಲ ಪ್ರಯತ್ನ, ಶಿವಮೊಗ್ಗದಲ್ಲಿ “ಕೆ.ಎ.ದಯಾನಂದ್ ಐಎಎಸ್ ವಾಚನಾಲಯ”, ಏನಿದರ ಪ್ರಯೋಜನ, ಇಲ್ಲಿದೆ ಕಂಪ್ಲೀಟ್ ವರದಿ

ರೈಲುಗಳ ವಿವರ
ರೈಲುಗಳ ಸಂಖ್ಯೆ 07389/07390 ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್
ಈ ವಿಶೇಷ ರೈಲು (07389) ಯಶವಂತಪುರ ಮತ್ತು ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಸೆ.15 ರಂದು ಸಂಜೆ 6.15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಮಾರ್ಗ ಮಧ್ಯದಲ್ಲಿ ತುಮಕೂರು- 07:03/07:05pm, ಅರಸೀಕೆರೆ- 08:15/08:20pm, ಬೀರೂರು- 08:58/09:00pm, ದಾವಣಗೆರೆ- 10:20/10:22pm, ಹರಿಹರ– 10:36/10:38pm, ಹಾವೇರಿ- 12:03/12:05am, ಹುಬ್ಬಳ್ಳಿ- 02:00/02:10am ಮತ್ತು ಧಾರವಾಡ -02:38/02:40 am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.
ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07390 ಬೆಳಗಾವಿ ಮತ್ತು ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೆ.16 ರಂದು ಸಂಜೆ 5:30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 4:30 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
ಈ ರೈಲು ಮಾರ್ಗದಲ್ಲಿ ಧಾರವಾಡ- 07:48/07:50pm, ಹುಬ್ಬಳ್ಳಿ- 08:35/08:45pm, ಹಾವೇರಿ- 09:58/10:00pm, ಹರಿಹರ- 10:43/10:45pm, ದಾವಣಗೆರೆ- 11:13/11:15pm, ಬೀರೂರು- 12:38/12:40am, ಅರಸೀಕೆರೆ- 01:15/01:20am ಮತ್ತು ತುಮಕೂರು -02:28/02:30am ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.

Drama Logo

ರೈಲುಗಳ ಸಂಖ್ಯೆ 07391/07392 ಯಶವಂತಪುರ-ಬೆಳಗಾವಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್
ಈ ವಿಶೇಷ ರೈಲು (07391) ಯಶವಂತಪುರ ಮತ್ತು ಬೆಳಗಾವಿ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 17 ರಂದು ಸಂಜೆ 06:15 ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಬೆಳಗಾವಿ ನಿಲ್ದಾಣಕ್ಕೆ ಆಗಮಿಸದೆ.
ಈ ವಿಶೇಷ ರೈಲು ಮಾರ್ಗ ಮಧ್ಯದಲ್ಲಿ (07391) ತುಮಕೂರು- 07:03/07:05pm, ಅರಸೀಕೆರೆ- 08:15/08:20pm, ಬೀರೂರು- 08:58/09:00pm, ದಾವಣಗೆರೆ- 10:20/10:22pm, ಹರಿಹರ– 10:36/10:38 pm, ಹಾವೇರಿ- 12:03/12:05am, ಹುಬ್ಬಳ್ಳಿ- 02:00/02:10am ಮತ್ತು ಧಾರವಾಡ -02:38/02:40am ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.
ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 07392 ಬೆಳಗಾವಿ ಮತ್ತು ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 18 ರಂದು ಸಂಜೆ 06:30 ಗಂಟೆಗೆ ಬೆಳಗಾವಿ ನಿಲ್ದಾಣದಿಂದ ಹೊರಟು, ಮರುದಿನ ಬೆಳಿಗ್ಗೆ 05:25 ಗಂಟೆಗೆ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಮಾರ್ಗ ಮಧ್ಯದಲ್ಲಿ (07392) ಧಾರವಾಡ- 09:18/09:20pm, ಹುಬ್ಬಳ್ಳಿ 09:50/10:10pm, ಹಾವೇರಿ- 11:08/11:10pm, ಹರಿಹರ-11:56/11:58pm, ದಾವಣಗೆರೆ- 12:18/12:20am, ಬೀರೂರು- 01:40/01:42am, ಅರಸೀಕೆರೆ- 02:27/02:30am ಮತ್ತು ತುಮಕೂರು- 03:50/03:52am ನಿಲ್ದಾಣಗಳಿಗೆ ಆಗಮಿಸಿ/ ನಿರ್ಗಮಿಸಲಿದೆ.
ವಿಶೇಷ ಬೋಗಿಗಳ ವ್ಯವಸ್ಥೆ
ಈ ವಿಶೇಷ ರೈಲುಗಳಲ್ಲಿ ಎಸಿ ಟು ಟೈಯರ್ ಬೋಗಿ (1), ಎಸಿ ತ್ರಿ ಟೈಯರ್ ಬೋಗಿಗಳು (7), ಸ್ಲೀಪರ್ ಕ್ಲಾಸ್ ಬೋಗಿಗಳು (8) ಮತ್ತು ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್‌ ಹಾಗೂ ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್‌ ಬೋಗಿಗಳು (2) ಸೇರಿದಂತೆ ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.

Dacoit | ಲಿಫ್ಟ್ ನೀಡುವುದಾಗಿ ಕರೆದೊಯ್ದು ದರೋಡೆ, 24 ಗಂಟೆಯಲ್ಲೇ ಆರೋಪಿಗಳು ಅಂದರ್

error: Content is protected !!