Water Test | ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಅಧಿಕಾರಿಗಳ ದಿಢೀರ್ ಭೇಟಿ, ನೀರು ಪರೀಕ್ಷೆ, ಕಾರಣವೇನು?

water test SMET

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರೈಲ್ವೆ ನಿಲ್ದಾಣಕ್ಕೆ (SMET) ಭೇಟಿ ನೀಡಿದ ಅಧಿಕಾರಿಗಳು ನೀರಿನ ಗುಣಮಟ್ಟವನ್ನು ಪರಿಶೀಲಿಸಿದರು.
ನೀರಿನ ಮಾದರಿಯನ್ನು ಸಂಗ್ರಹಿಸಿ ರಾಸಾಯನಿಕ ವಿಶ್ಲೇಷಣೆ ಮತ್ತು ಗುಣಮಟ್ಟ ಪರೀಕ್ಷೆಗೆ ಒಳಪಡಿಸಿದರು. ನೀರು ಪರೀಕ್ಷೆ ಕಿಟ್’ಗಳ ಮೂಲಕ ನೀರಿನ ಪರಿಶುದ್ಧತೆಯನ್ನು ಪರಿಶೀಲನೆ ಮಾಡಲಾಯಿತು.
ದೇಶದಾದ್ಯಂತ ಸ್ವಚ್ಛತಾ ಪಕವಾರ ಅಭಿಯಾನ ನಡೆಯುತ್ತಿದ್ದು, ಇದರ ಭಾಗವಾಗಿ ನೀರನ್ನು ಪರೀಕ್ಷೆಗೆ ಒಳಪಡಿಸಲಾಯಿತು.

READ | ಬೀಗರ ಊಟಕ್ಕೆಂದು ಹೊರಟಾಗ ಮನೆ ಪಕ್ಕದವರಿಂದ ಬಂತು ಕರೆ, ಮಾಲೀಕರು ಶಾಕ್

ಎಲ್ಲೆಲ್ಲಿ ಪರೀಕ್ಷೆ?
ಅಭಿಯಾನ ಅಂಗವಾಗಿ ರಾಜ್ಯದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಪರೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ನೈರುತ್ಯ ರೈಲ್ವೆ  (South Western Railway) ವ್ಯಾಪ್ತಿಯ ಮೈಸೂರು, ಅರಸಿಕೆರೆ, ಹರಿಹರ, ದಾವಣಗೆರೆ, ಶಿವಮೊಗ್ಗ ರೈಲ್ವೆ ನಿಲ್ದಾಣಗಳಲ್ಲಿ ಪರಿಶೀಲನೆ ಮಾಡಲಾಯಿತು.

error: Content is protected !!