
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಅಮೀರ್ ಅಹಮ್ಮದ್ ಕಾಲೋನಿ ಮತ್ತು ಲಕ್ಷ್ಮೀ ಟಾಕೀಸ್ ಪ್ರದೇಶಗಳಲ್ಲಿ ಪೊಲೀಸರು ದಿಢೀರ್ ಕಾರ್ಯಾಚರಣೆ ಕೈಗೊಂಡಿದ್ದಾರೆ.
READ | ಶಿವಮೊಗ್ಗಕ್ಕೆ ಹೊಸ ಇನ್ಸ್ಪೆಕ್ಟರ್’ಗಳ ನಿಯೋಜನೆ, ಡಿವೈಎಸ್ಪಿ ವರ್ಗಾವಣೆ
ಜಯನಗರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ ನವೀನ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಏರಿಯಾ ಡಾಮಿನೇಷನ್ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಮತ್ತು ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರ ಪೂರ್ವಾಪರ ವಿಚಾರಿಸಲಾಯಿತು.
ಸಾರ್ವಜನಿಕ ಪ್ರದೇಶದಲ್ಲಿ ಜನರಿಗೆ ಕಿರುಕುಳ ನೀಡುತ್ತಿದ್ದವರ ವಿರುದ್ಧ 16 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ. ಐಎಂವಿ ಕಾಯ್ದೆ ಅಡಿ 9 ಪ್ರಕರಣ ಮತ್ತು ಕೋಟ್ಪಾ ಕಾಯ್ದೆ ಅಡಿ 5 ಪ್ರಕರಣಗಳನ್ನು ದಾಖಲಿಸಿ, ದಂಡ ವಿಧಿಸಲಾಗಿದೆ.