Sakrebyle elephant camp | ಸಕ್ರೆಬೈಲು ಆನೆಬಿಡಾರಕ್ಕೆ ಮತ್ತೊಂದು ಅತಿಥಿಯ ಆಗಮನ, ಬಿಡಾರದಲ್ಲಿ ಈಗ ಆನೆಗಳೆಷ್ಟಿವೆ?

Bhanumathi Sakrebailu

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭಾನುಮತಿ‌ ಆನೆಯು ಹೆಣ್ಣು ಮರಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮರಿ ಆರೋಗ್ಯವಾಗಿವೆ.
ಇತ್ತೀಚೆಗಷ್ಟೇ ಭಾನುಮತಿಯ ಬಾಲಕ್ಕೆ ದುಷ್ಕರ್ಮಿಗಳು ಚೂಪಾದ ಆಯುಧದಿಂದ ಹೊಡೆದು ಗಾಯಗೊಳಿಸಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ಸಹ ನಡೆಯುತ್ತಿದೆ. ಈ ಆನೆಯು ಬಿಡಾರದಲ್ಲಿಯೇ ಮರಿಗೆ ಜನ್ಮ ನೀಡಿದೆ.

VIDEO REPORT | ಚಕ್ರವ್ಯೂಹ ಬೇಧಿಸಿದ ಆನೆ ಅಭಿಮನ್ಯು

READ | ಶಿವಮೊಗ್ಗ ಪ್ರವಾಸಿ ತಾಣಗಳಿಗೆ ಹೈಟೆಕ್ ಸ್ಪರ್ಶ, ಮಧು ಬಂಗಾರಪ್ಪ ಸೂಚಿಸಿದ ಟಾಪ್ 5 ಅಂಶಗಳು

ಜಂಬೂ ಸವಾರಿಗೆ ಬಂದಿದ್ದ ನೇತ್ರಾವತಿ ಆನೆಯು ಶಿವಮೊಗ್ಗ ನಗರದ ವಾಸವಿ ಶಾಲೆಯ ಆವರಣದಲ್ಲಿ ಹೆಣ್ಣು ಆನೆ ಮರಿಗೆ ಜನ್ಮ ನೀಡಿತ್ತು. ಪುನೀತ್ ರಾಜ್ ಕುಮಾರ್ ಎಂಬ ಆನೆಗೆ ನೇತ್ರಾವತಿ ಜನ್ಮ ನೀಡಿತ್ತು.‌ ಪುನೀತ್ ರಾಜ್ ಕುಮಾರ್ ನಾಲ್ಕನೇ ಮರಿಯಾದರೆ ದಸರಾಗೆ ತಂದಾಗ ಜನ್ಮ‌ವಾದ ಮರಿ ಐದನೇಯದ್ದಾಗಿದೆ. ನೇತ್ರಾವತಿ ಹೆರಿಗೆಯ ಕೆಲ ದಿನಗಳ‌ ಅಂತರದಲ್ಲಿಯೇ ಇನ್ನೊಂದು ಆನೆ ಮರಿ ಸಕ್ರೆಬೈಲು ಆನೆಬಿಡಾರಕ್ಕೆ ಅತಿಥಿಯಾಗಿ ಆಗಮಿಸಿದೆ.
22ಕ್ಕೇರಿದ ಆನೆಗಳ ಸಂಖ್ಯೆ
ಭಾನುಮತಿಯು ಹೆಣ್ಣು ಮರಿಗೆ ಜನ್ಮ ನೀಡಿದ ಬಳಿಕ ಸಕ್ರೆಬೈಲು ಆನೆಬಿಡಾರದಲ್ಲಿ ಆನೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಕೆಲವು ತಿಂಗಳ ಹಿಂದೆ ಕೆಲವನ್ನು ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಕಳುಹಿಸಲಾಗಿತ್ತು. ಒಂದು ಆನೆ ಸಾವನ್ನಪ್ಪಿತ್ತು. ಈ ಎಲ್ಲ‌ ಬೆಳವಣಿಗೆಗಳಿಂದಾಗಿ ಆನೆಗಳ ಸಂಖ್ಯೆಯು 18ಕ್ಕೆ ಕುಸಿದಿತ್ತು.
ಪ್ರಸ್ತುತ ಬಿಡಾರದಲ್ಲಿ ಆರು ಹೆಣ್ಣು ಮತ್ತು 16 ಗಂಡು ಆನೆಗಳಿವೆ.
24 ತಿಂಗಳು ಗಜಪ್ರಸವ
ದಿನಗಳು ತುಂಬಿದರೂ ಹೆರಿಗೆ ಆಗದಿದ್ದರೆ ‘ಇದೇನು ಗಜಪ್ರಸವವೇ?’ ಎಂಬ ಉದ್ಗಾರ ಸಹಜವಾಗಿಯೇ ಕೇಳಿಬರುತ್ತದೆ. ಅದಕ್ಕೆ ಕಾರಣ ಆನೆಗಳಿಗಿರುವ ಸುದೀರ್ಘ ಗರ್ಭಧಾರಣೆ. ತಜ್ಞರ ಪ್ರಕಾರ ಆನೆಯ ಗರ್ಭಧಾರಣೆ ಅವಧಿ ಬರೋಬ್ಬರಿ 24 ತಿಂಗಳು ಅಂದರೆ ಹೆಚ್ಚು ಕಡಿಮೆ ಎರಡು‌ ವರ್ಷ. ಹೆರಿಗೆಯಾಗಬೇಕಾದರೆ ಕನಿಷ್ಠ 18 ತಿಂಗಳು ಹಿಡಿಯುತ್ತದೆ.

ಅಳುತ್ತ ತಾಯಿಯಿಂದ ದೂರವಾದ 2 ವರ್ಷದ ಆನೆ ಮರಿ, ತಾಯಿಯಿಂದ ಬೇರ್ಪಟ್ಟ ಮರಿಯಾನೆಯ ಆರೈಕೆ ಹೇಗೆ ನಡಿಯುತ್ತದೆ?

error: Content is protected !!