BY Vijayendra | ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ, ಅವರ ರಾಜಕೀಯ ಜೀವನದ ಹಾದಿಯ ಹೈಲೈಟ್ಸ್ ಇಲ್ಲಿದೆ

BY VIJAYENDRA 3

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಒಲಿದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೂತನ ಸಾರಥಿಯನ್ನು ರಾಜ್ಯಕ್ಕೆ ನೇಮಿಸಿದ್ದು, ಈ ಕುರಿತು ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರೂ ರಾಜ್ಯ ರಾಜಕೀಯದಲ್ಲಿ ಪ್ರಬಲ ನಾಯಕ ಬಿ.ಎಸ್.ಯಡಿಯೂರಪ್ಪ ಪ್ರಭಾವವನ್ನು ಮನಗಂಡು ಹೈಕಮಾಂಡ್ ವಿಜಯೇಂದ್ರ ಅವರನ್ನು ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಿಸುವ ನಿರ್ಧಾರ ಕೈಗೊಂಡಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ವೋಟ್ ಬ್ಯಾಂಕ್ ಕ್ರೋಡೀಕರಿಸುವ ಪ್ರಯತ್ನ ಇದಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

BY Vijayendra 2

READ | ಸಕ್ರೆಬೈಲು ಆನೆಬಿಡಾರಕ್ಕೆ ಮತ್ತೊಂದು ಅತಿಥಿಯ ಆಗಮನ, ಬಿಡಾರದಲ್ಲಿ ಈಗ ಆನೆಗಳೆಷ್ಟಿವೆ?

ವಿಜಯೇಂದ್ರ ರಾಜಕೀಯ ಜೀವನದ ಹಾದಿ

  1. ವಿಜಯೇಂದ್ರ ಯಡಿಯೂರಪ್ಪ ಅವರು 1976ರಲ್ಲಿ ಶಿಕಾರಿಪುರದಲ್ಲಿ ಜನಿಸಿದರು.
  2. ಮೂರು ವರ್ಷಗಳ ಹಿಂದೆ ಬಿಜೆಪಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಹೊಣೆ ಹೊತ್ತರು. ಅಚ್ಚರಿಯ ರೀತಿಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದರು.
  3. ರಾಜ್ಯದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ ವಿಜಯೇಂದ್ರ ಅವರು ಯಡಿಯೂರಪ್ಪ ಸಿಎಂ ಆಗುವಲ್ಲಿ ಅಹರ್ನಿಷಿ ಪ್ರಯತ್ನಿಸಿದರು.
  4. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಂದೆ ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರದಿಂದ ಸ್ಪರ್ಧಿಸಿ ಶಾಸಕರಾಗಿ ಹೊರಹೊಮ್ಮಿದರು. ಇದು ಅವರ ರಾಜಕೀಯ ಬದುಕಿನ ಪ್ರಮುಖ ಮೈಲಿಗಲ್ಲಾಗಿದೆ.
  5. ಉತ್ತಮ ಸಂಘಟಕ, ಲಿಂಗಾಯತ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ವಿಜಯೇಂದ್ರ ಅವರು ರಾಜಕೀಯ ಪತ್ರಾಂಗಾರ ಎಂಬ ಶ್ರೇಯವನ್ನೂ ಪಡೆದಿದ್ದಾರೆ.
  6. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪಕ್ಷದ ಅತ್ಯುನ್ನತ ಹುದ್ದೆ ಸಿಕ್ಕಿದ್ದು, ಉಜ್ವಲ ರಾಜಕೀಯ ಭವಿಷ್ಯಕ್ಕೆ ನಾಂದಿಯಾಗಲಿದೆ.
  7. ಶಿಕಾರಿಪುರದಿಂದ ಸ್ಪರ್ಧಿಸಿದ ಬಿಜೆಪಿ ನಾಯಕನಿಗೆ 2ನೇ ಸಲ ರಾಜ್ಯಾಧ್ಯಕ್ಷ ಸ್ಥಾನ ಒಲಿದಿದೆ. ಈ ಮುಂಚೆ ಯಡಿಯೂರಪ್ಪ. ಈಗ ವಿಜಯೇಂದ್ರ ಯಡಿಯೂರಪ್ಪ.

BY Vijayendra 1

error: Content is protected !!