ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿವಿಧ ಬಗೆಯ ಕೇಕ್ ತಯಾರಿಕೆ (Cake making) ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ (Keladi Shivappa Nayaka College of Agricultural and Horticultural Sciences) ಪ್ರಕಟಣೆ ತಿಳಿಸಿದೆ.
ನವುಲೆಯಲ್ಲಿರುವ ವಿವಿಯ ಆವರಣದ ಬೇಕರಿ ಘಟಕದಲ್ಲಿನ.16ರಂದು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು ತರಬೇತಿ ಶುಲ್ಕ 250 ರೂ.ಗಳನ್ನು ಪಾವತಿಸಿ, ನ.15ರೊಳಗೆ ಹೆಸರು ನೋಂದಣಿ ಮಾಡಬೇಕು.
READ | ವಿಜಯೇಂದ್ರಗೆ ದೀಪಾವಳಿ ಗಿಫ್ಟ್ ನೀಡಿದ ಬಿಜೆಪಿ ಹೈಕಮಾಂಡ್, ವಿಜಯೇಂದ್ರ ರಾಜಕೀಯ ಜೀವನದ ಹಾದಿಯ ಹೈಲೈಟ್ಸ್ ಇಲ್ಲಿದೆ
ಹೆಸರು ನೋಂದಣಿ ಹೇಗೆ?
ತರಬೇತಿಯನ್ನು ಪಡೆಯಲು ಇಚ್ಛಿಸುವವರು ಕೃಷಿ ಮಹಾವಿದ್ಯಾಲಯದ ಡಾ. ಶಿವಲೀಲಾ ಪಾಟೀಲ್ (7411680410) ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು. ಅಥವಾ ಖುದ್ದಾಗಿ ಭೇಟಿ ನೀಡಬಹುದು.
ಏನೆಲ್ಲ ಕಂಷಿಷನ್ಸ್
ಮೊದಲು ನೋಂದಾಯಿಸಿದ 12 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು.
ತರಬೇತಿಗೆ ಬರುವಾಗ ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್‍ನ್ನು ತರಬೇಕು.
ಶಿವಮೊಗ್ಗ ಜಿಲ್ಲೆಯವರಿಗೆ ಮಾತ್ರ ಅವಕಾಶವಿದೆ.