Traffic station | ಸಾಗರದಲ್ಲಿ ಸಂಚಾರ ಠಾಣೆ ಆರಂಭದ ಬಗ್ಗೆ ಐಜಿಪಿ ತ್ಯಾಗರಾಜನ್ ಮಹತ್ವದ ಹೇಳಿಕೆ

SAGAR Taluk

 

 

ಸುದ್ದಿ ಕಣಜ.ಕಾಂ ಸಾಗರ
SAGAR: ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿರುವ ಪೂರ್ವ ವಲಯ ಮಹಾನಿರೀಕ್ಷಕ (ಐಜಿಪಿ) ತ್ಯಾಗರಾಜನ್ ಸಾಗರದಲ್ಲಿ ಸಂಚಾರ ಪೊಲೀಸ್ ಠಾಣೆ (sagar traffic police station) ಆರಂಭದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

READ | ಸಾಗರದಿಂದ ಪಲ್ಲಕ್ಕಿ ಸಂಚಾರ ಆರಂಭ, ಇಲ್ಲಿದೆ ವೇಳಾಪಟ್ಟಿ

ಸಾಗರದ ಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾತನಾಡಿದ ಅವರು, ‘ಸಾಗರ ಪಟ್ಟಣಕ್ಕೆ ಸಂಚಾರ ಪೊಲೀಸ್ ಠಾಣೆ ಆರಂಭಿಸುವ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ ಪ್ರಸ್ತಾವನೆ ಬಂದಿದೆ. ಅದನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಹಲವೆಡೆಯಿಂದ ಸಂಚಾರ ಠಾಣೆಗೆ ಬೇಡಿಕೆ
ದಾವಣಗೆರೆ ವ್ಯಾಪ್ತಿಯ ಚನ್ನಗಿರಿ, ಶಿವಮೊಗ್ಗ ಜಿಲ್ಲೆಯ ಸಾಗರ, ಶಿಕಾರಿಪುರ ಮತ್ತಿತರ ಕಡೆಗಳಲ್ಲಿ ಸಂಚಾರ ಠಾಣೆ ಆರಂಭಿಸುವುದಕ್ಕೆ ಬೇಡಿಕೆ ಇದೆ. ಆದರೆ, ಸ್ಥಳೀಯ ಬೇಡಿಕೆ, ವಾಹನದಟ್ಟಣೆಯನ್ನು ಮನಗಂಡು ಪರಿಶೀಲನೆ ಬಳಿಕವಷ್ಟೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಆನಂತರ ಮಂಜೂರು ಮಾಡಲಾಗುವುದು. ಸಾಗರದ ವಿಚಾರಕ್ಕೆ ಬಂದಾಗ ಸಂಚಾರ ಠಾಣೆ ಆರಂಭಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ‌ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

error: Content is protected !!