
ಸುದ್ದಿ ಕಣಜ.ಕಾಂ ಶಿಕಾರಿಪುರ
SHIKARIPURA: ತಾಲ್ಲೂಕಿನ ಮದಗ ಹಾರನಹಳ್ಳಿ ಗ್ರಾಮದಲ್ಲಿ ಪ್ರತಿವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸುವ ಹೋರಿ ಹಬ್ಬದ (Hori habba) ಆಚರಣೆಗೆ ಪೊಲೀಸ್ ಇಲಾಖೆ ಅಡ್ಡಿಪಡಿಸಿದ ನಡೆಯನ್ನು ಖಂಡಿಸಿ ಸಂಸದ ಬಿ.ವೈ. ರಾಘವೇಂದ್ರ (BY Raghavendra) ಅವರ ನೇತೃತ್ವದಲ್ಲಿ ಗ್ರಾಮಸ್ಥರೊಂದಿಗೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದರು.
READ | ಎಚ್.ಎಸ್.ಆರ್.ಪಿ ಗಡುವು ವಿಸ್ತರಣೆ, ಕೊನೆಯ ದಿನಾಂಕ ಯಾವುದು? ಇದುವರೆಗೆ ಎಷ್ಟು ಜನ ಅಳವಡಿಸಿಕೊಂಡಿದ್ದಾರೆ?
ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ (Gurumurthy), ಶಿಕಾರಿಪುರ ಮಂಡಲ ಅಧ್ಯಕ್ಷ ವೀರೇಂದ್ರ ಪಾಟೀಲ್, ಶಿಕಾರಿಪುರ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್, ತೊಗರ್ಸಿ ಮಹಾಶಕ್ತಿ ಕೇಂದ್ರದ ಸತೀಶ್, ಮುಖಂಡ ರುದ್ರೇಶ್ ಇತರರು ಉಪಸ್ಥಿತರಿದ್ದರು.
VIDEO REPORT | ಹೋರಿ ಹಬ್ಬ ತಡೆದಿದ್ದಕ್ಕೆ ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನೆಯ ವಿಡಿಯೋ ವೀಕ್ಷಿಸಿ