Suspected Box | ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ಅನುಮಾನಾಸ್ಪದ ಬಾಕ್ಸ್ ಪತ್ತೆ, ಆಪರೇಷನ್ ಗೆ ಮಳೆ ಅಡ್ಡಿ, ಇದುವರೆಗಿನ ಬೆಳವಣಿಗೆಗಳೇನು?

BDDS Bomb squad railway station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರೈಲ್ವೆ ನಿಲ್ದಾಣ ಸಮೀಪ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಬಾಕ್ಸ್ ಗಳ‌ ಪರಿಶೀಲನೆಗೆ ಬೆಂಗಳೂರಿನಿಂದ ಬಿಡಿಡಿಎಸ್ ತಂಡ ಆಗಮಿಸಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಂಜೆ ಬಂದಿರುವ bomb detection and disposal squads (BDDS) ಸಿಬ್ಬಂದಿ ಬಾಕ್ಸ್ ಗಳನ್ನು ಅತ್ಯಾಧುನಿಕ ಉಪಕರಣಗಳಿಂದ ಪರಿಶೀಲನೆಗ ಒಳಪಡಿಸಿದ್ದಾರೆ. ತಪಾಸಣೆ ವೇಳೆ‌ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದು, ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

Bomb Sqad BDDS
ಬಾಂಬ್ ಸೂಟ್ ತೊಟ್ಟ ಬಿಡಿಡಿಎಸ್ ಸಿಬ್ಬಂದಿ.

READ | ಸಕ್ರೆಬೈಲು ಆನೆಬಿಡಾರಕ್ಕೆ‌ ಮತ್ತೊಂದು ಅತಿಥಿಯ ಆಗಮನ, ಈಗ ಬಿಡಾರದಲ್ಲಿರುವ ಆನೆಗಳ ಸಂಖ್ಯೆ ಎಷ್ಟು?

ಇದುವರೆಗಿನ ಬೆಳವಣಿಗಳೇನು?
ಬೆಳಗ್ಗೆ 11 ಗಂಟೆ ಹೊತ್ತಿಗೆ ಆಟೋ‌ ಚಾಲಕನೊಬ್ಬ ಅನುಮಾನಾಸ್ಪದವಾಗಿ ಬಿದ್ದಿದ್ದ ಎರಡು ಬಾಕ್ಸ್ ಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಗತರಾದ ಪೊಲೀಸ್ ಸಿಬ್ಬಂದಿ ಶ್ವಾನದಳದೊಂದಿಗೆ ಪರಿಶೀಲಿಸಿದ್ದಾರೆ. ಎಎಸ್.ಟಿ ತಂಡ ಸಹ ಬಾಕ್ಸ್ ಒಳಗೇನಾದರೂ ಸ್ಫೋಟಕಗಳಿರಬಹುದೇ ಎಂಬ ಶಂಕೆಯ ಆಧಾರದ ಮೇಲೆ ಪರಿಶೀಲಿಸಿದೆ. ಆದರೆ, ಹೆಚ್ಚುವರಿ ಅತ್ಯಾಧುನಿಕ ಉಪಕರಣಗಳ ಅವಶ್ಯಕತೆ ಮನಗಂಡು‌ ಮೇಲಾಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ. ಬೆಂಗಳೂರಿನಿಂದ ಬಿಡಿಡಿಎಸ್ ಕಳುಹಿಸಲಾಗಿದೆ.
ಐದು ಜನರಿರುವ ಬಿಡಿಡಿಎಸ್ ತಂಡವು ಸ್ಥಳಕ್ಕೆ ದೌಡಾಯಿಸಿ ಸ್ಥಳದಲ್ಲಿ ನಡೆದ ಘಟನೆ, ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲೇನು ನಡೆದಿದೆ ಎನ್ನುವ ಸ್ಪಷ್ಟತೆ ಪಡೆದಿದ್ದಾರೆ. ಅದಾದ ಬಳಿಕ ಬಾಂಬ್ ಸೂಟ್ ಧರಿಸಿದ ವ್ಯಕ್ತಿಯೊಬ್ಬರು ಅನುಮಾನಾತ್ಮಕವಾಗಿ ಇಟ್ಟಿದ್ದ ಬಾಕ್ಸ್ ಬಳಿ ಬಂದು ಪರಿಶೀಲಿಸಲು ಆರಂಭಿಸಿದ್ದಾರೆ.

Bomb squad BDDS railway 1
ಇನ್ನೊಬ್ಬ ಸಿಬ್ಬಂದಿಯೊಂದಿಗೆ ಚರ್ಚೆ.

ಶೋಧ ಕಾರ್ಯಕ್ಕೆ ಮಳೆ‌ ಅಡ್ಡಿ
ನಗರದ ರೈಲ್ವೆ ನಿಲ್ದಾಣದಲ್ಲಿ‌ ಎರಡು ಅನುಮಾನಾಸ್ಪದ ಬಾಕ್ಸ್ ವಿಚಾರವಾಗಿ ಪರಿಶೀಲನೆ ನಡೆಯುತ್ತಿದೆ. ರಾತ್ರಿ 12 ಗಂಟೆಯಾದರೂ ಬಾಕ್ಸ್ ಮಿಸ್ಟ್ರಿ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಭಾನುವಾರ ರಾತ್ರಿ ಏಕಾಏಕಿ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು, ಬಿಡಿಡಿಎಸ್ ತಂಡಕ್ಕೆ ಶೋಧ ಕಾರ್ಯ‌ಮಾಡಲಾಗಿಲ್ಲ. ಐದು ಜನ ಸಿಬ್ಬಂದಿಯನ್ನೊಳಗೊಂಡ‌ ತಂಡವು ಕಾರ್ಯಾಚರಣೆ ಮಾಡಲಾಗಲಿಲ್ಲ. ಹೀಗಾಗಿ, ಕಾರ್ಯಾಚರಣೆ ಅಲ್ಲಿಗೆ ನಿಲ್ಲಿಸಿದರು. ಮಳೆರಾಯ ಕೃಪೆ ತೋರಿ ಬಿಡುವು ನೀಡಿದರೆ ಪರಿಶೀಲಿಸಬಹುದು ಎಂದುಕೊಂಡು ತಪಾಸಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ತಪಾಸಣೆ ಕಾರ್ಯ ರಾತ್ರಿಯೂ ನಡೆಯಲಿದೆ. ಎಲ್ಲ ಪೊಲೀಸರು ಅಲ್ಲಿಯೇ ಮೊಕ್ಕಾ ಹೂಡಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕರ ಭೇಟಿ
ಶಿವಮೊಗ್ಗ ನಗರ ಕ್ಷೇತ್ರದ ಶಾಸಕ‌ ಎಸ್.ಎನ್.ಚನ್ನಬಸಪ್ಪ ಅವರು ರೈಲ್ವೆ ನಿಲ್ದಾಣ ಬಳಿ ಆಗಮಿಸಿ ಬಾಕ್ಸ್ ಸುತ್ತಲಿನ ವಿಚಾರಗಳ ಬಗ್ಗೆ ಮಾಹಿತಿ‌ ಪಡೆದರು. ಈ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು  ಹೇಳಿದರು.
ಶಿವಮೊಗ್ಗ ಬಿ ಉಪ ವಿಭಾಗದ ಡಿವೈಎಸ್ಪಿ ಎಂ.ಸುರೇಶ್, ಜಯನಗರ ಠಾಣೆ ಪಿಎಸ್.ಐ ನವೀನ್, ರೈಲ್ವೆ ಪಿಎಸ್.ಐ ಇಂದ್ರ ಸೇರಿದಂತೆ ಆರ್.ಪಿ.ಎಫ್, ಸಂಚಾರ ಪೊಲೀಸರು ಉಪಸ್ಥಿತರಿದ್ದರು.

error: Content is protected !!