Nitin Gadkari | ಜನವರಿಯಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಯಾವೆಲ್ಲ‌ ಕಾಮಗಾರಿಗೆ ಶಂಕುಸ್ಥಾಪನೆ?

Nitin Gadkari

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲೆಗೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಆಗಮಿಸಲಿದ್ದಾರೆ. ಆ ವೇಳೆ ಜಿಲ್ಲೆಯ ಹಲವು ಕಾಮಗಾರಿಗಳ‌ ಉದ್ಘಾಟನೆ ಸೇರಿದಂತೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ₹2,138 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದು, ₹139 ಕೋಟಿ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸುವರು.

READ | ಶಿವಮೊಗ್ಗ ವಿಮಾನ, ರೈಲು ನಿಲ್ದಾಣಕ್ಕೆ ಶೀಘ್ರವೇ ನಾಮಕರಣ, ಸಂಸದರ‌ ಪ್ರಮುಖ 2 ಘೋಷಣೆ

ಯಾವೆಲ್ಲ ಕಾಮಗಾರಿಗಳು ಪೂರ್ಣ?

BY Raghavendra 1
ಬಿ.ವೈ.ರಾಘವೇಂದ್ರ
  • ₹19.77 ಕೋಟಿ ವೆಚ್ಚದ ಬೈಂದೂರು- ರಾಣೆಬೆನ್ನೂರು ವಿಭಾಗದಲ್ಲಿ ಸೇತುವೆಗಳು ಪೂರ್ಣ
  • ₹55.62 ಕೋಟಿ ವೆಚ್ಚದಲ್ಲಿ ಶಿವಮೊಗ್ಗ- ಮಂಗಳೂರು ರಸ್ತೆಯಲ್ಲಿ ತುಂಗಾ ನದಿ ಸೇತುವೆ ಪೂರ್ಣ
  • ₹43.90 ಕೋಟಿ ವೆಚ್ಚದಲ್ಲಿ ಶಿವಮೊಗ್ಗ- ಚಿತ್ರದುರ್ಗ ನಡುವಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣ
  • ₹20.12 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಬೈಪಾಸ್‌ನಲ್ಲಿ ತುಂಗಾನದಿಗೆ ಸೇತುವೆ ಕಾಮಗಾರಿ ಮುಕ್ತಾಯವಾಗಿದೆ. ಇವೆಲ್ಲ ಕಾಮಗಾರಿಗಳನ್ನು ಉದ್ಘಾಟಿಸಲಾಗುವುದು.

ಯಾವೆಲ್ಲ ಕಾಮಗಾರಿಗಳಿಗೆ ಶಂಕುಸ್ಥಾಪನೆ?

  • ₹313 ಕೋಟಿ ವೆಚ್ಚದಲ್ಲಿ ಶರಾವತಿ ಹಿನ್ನೀರಿಗೆ ಎರಡು ಸೇತುವೆ, ₹653 ಕೋಟಿ ವೆಚ್ಚದ ಹೊನ್ನಾವರ- ಚಿಟ್ಟೂರು ವಿಭಾಗದ ಎನ್.ಎಚ್. ಕಾಮಗಾರಿ.
  • ₹39 ಕೋಟಿ ವೆಚ್ಚದ ಶಿವಮೊಗ್ಗ-ಮಂಗಳೂರು ವಿಭಾಗದ ಎನ್.ಎಚ್.169 ರಸ್ತೆ ಅಗಲೀಕರಣ‌ ಕಾಮಗಾರಿ.
  • ₹538 ಕೋಟಿ ವೆಚ್ಚದಲ್ಲಿ ನೆಲ್ಲಿಸರ ಕ್ಯಾಂಪ್‌ನಿಂದ ತೀರ್ಥಹಳ್ಳಿವರೆಗೆ (ಚತುಷ್ಪಥ ರಸ್ತೆ).
  • ₹650 ಕೋಟಿ ವೆಚ್ಚದಲ್ಲಿ ಶಿವಮೊಗ್ಗ ಲಯನ್ ಸಫಾರಿಯಿಂದ ತಾಳಗುಪ್ಪವರೆಗೆ ದ್ವಿಪಥ ರಸ್ತೆಗಳನ್ನು ಚತುಷ್ಪಥ ರಸ್ತೆಗಳನ್ನಾಗಿ ಅಗಲೀಕರಣ ಮಾಡುವ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುವುದು.

ಮಾಧ್ಯಮಗೋಷ್ಠಿಯಲ್ಲಿ ಶಾಸಕ ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ಅಣ್ಣಪ್ಪ ಇತರರು‌ ಉಪಸ್ಥಿತರಿದ್ದರು.

error: Content is protected !!