Crime news | 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ‌ ಹಲವರ ಬಂಧನ, ಯಾರ ಮೇಲೆ ಯಾವೆಲ್ಲ ಕೇಸ್ ಗಳಿವೆ?

Crime news

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿವುಧ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಲೆಮರೆಸಿಕೊಂಡಿದ್ದ ಹಲವು ಆರೋಪಗಳನ್ನು ಬಂಧಿಸಲಾಗಿದೆ.
ಪ್ರೋಸೆಸ್ ಜಾರಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ನಾಗರಾಜ್, ಕುಮಾರ್ ನಾಯ್ಕ್ ಅವರು ಹಲ್ಲೆ ಪ್ರಕರಣದಲ್ಲಿ ಕಳೆದ 24 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು.

Crime logo

READ | ರಾತ್ರಿ‌ ಉಂಡು ಮಲಗಿದ ಶಿಕ್ಷಕ, ಬೆಳಗೆದ್ದು ನೋಡಿದರೆ ಶಾಕ್!

ಯಾರೆಲ್ಲರ ಬಂಧನ?
ಭದ್ರಾವತಿಯ ಅಂತರಗಂಗೆಯ ಮಾಣಿಕ್ಯ, ಮಹಿಳೆಯ ಮೇಲಿನ ಹಲ್ಲೆ ಪ್ರಕರಣದಲ್ಲಿ ಕಳೆದ 3 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಭದ್ರಾವತಿಯ ದೊಣಬಘಟ್ಟದ ತೋಹಿದ್, ಕರ್ನಾಟಕ ಅಬಕಾರಿ ಕಾಯ್ದೆ ಪ್ರಕರಣದಲ್ಲಿ ಕಳೆದ 3 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಭದ್ರಾವತಿಯ ಗಜೇಂದ್ರ, ಮನೆಗಳ್ಳತನ ಪ್ರಕರಣದಲ್ಲಿ ಕಳೆದ 2 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಚನ್ಮಗಿರಿಯ ರಾಜು, ಕನ್ನ ಕಳವು ಪ್ರಕರಣದಲ್ಲಿ ಕಳೆದ 2 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಭದ್ರಾವತಿಯ ವಿನಯ್ ಕುಮಾರ್, ಮನೆಗಳ್ಳತನ ಪ್ರಕರಣದಲ್ಲಿ ಕಳೆದ 4 ವರ್ಷಗಳಿಂದ ವಿಚಾರಣೆಗೆ ಹಾಜರಾಗದ ಚಿತ್ರದುರ್ಗದ ದಾದಾಪೀರ್ ಅಲಿಯಾಸ್ ದಾದೂ, ಕನ್ನ ಕಳವು ಪ್ರಕರಣದಲ್ಲಿ ಕಳೆದ 5 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಭದ್ರಾವತಿಯ ಮಂಜ ಅಲಿತಾಸ್ ಠಕ್ಕ ಮಂಜ ಸೇರಿ ಒಟ್ಟು 7 ಜನ ಎಲ್.ಪಿ.ಆರ್, 7 ಜನ ಪ್ರೊಕ್ಲಮೇಷನ್ ಹಾಗೂ 19 ಜನ ತಲೆ ಮರೆಸಿಕೊಂಡಿದ್ದ ವಾರೆಂಟ್ ಆರೋಪಗಳನ್ನು ವಶಪಡಿಸಿಕೊಳ್ಳಲಾಗಿದೆ.
ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯ ರಾಘವೇಂದ್ರ, ಸಜ್ಜನ್ ರಾವ್ ಅವರು ಮನೆಗಳ್ಳತನ ಪ್ರಕರಣದಲ್ಲಿ ಕಳೆದ 7 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಜನ್ನಾಪುರದ ಅರುಣ್ ಅಲಿಯಾಸ್ ಮುಂಗುಸಿ, ಹಲ್ಲೆ ಪ್ರಕರಣದಲ್ಲಿ ಕಳೆದ 5 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಭದ್ರಾವತಿಯ ಇರ್ಷಾದ್ ಅಲಿಯಾಸ್ ದಾದಾಗಿರಿ, ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಪ್ರಕರಣದಲ್ಲಿ ಕಳೆದ 12 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಶಿವಮೊಗ್ಗ ಹಕ್ಕಿಪಿಕ್ಕಿ ಕ್ಯಾಂಪ್ ಸುಧಾಕರ್, ದೊಂಬಿ ಪ್ರಕರಣದಲ್ಲಿ ಕಳೆದ 10 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಬಾರಂದೂರಿನ ರಂಗಯ್ಯ ಸೇರಿ ಒಟ್ಟು 4 ಜನ ಎಲ್.ಪಿ.ಆರ್ 3 ಜನ ಪ್ರೊಕ್ಲಮೇಷನ್ ಹಾಗೂ 14 ಜನ ತಲೆ ಮರೆಸಿಕೊಂಡಿದ್ದ ವಾರೆಂಟ್ ಆಸಾಮಿಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸಿ ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ. ಸಾಗರ ಪೊಲೀಸ್ ಠಾಣೆಯ ಶಂಕರ್, ತುಂಗಾನಗರ ಪೊಲೀಸ್ ಠಾಣೆಯ ದ್ಯಾಮಣ್ಣ ಬರಹಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಠಾಣೆಯಲ್ಲಿ ಕಡತಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿರುತ್ತಾರೆ.
ಉತ್ತಮ ಕರ್ತವ್ಯಕ್ಕಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್.ಪಿ ಮಿಥುನ್ ಕುಮಾರ್ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿರುತ್ತಾರೆ.

Jumping spider | ಪಶ್ಚಿಮಘಟ್ಟದಲ್ಲಿ ಹೊಸ ಪ್ರಭೇದದ ‘ಜಂಪಿಂಗ್ ಸ್ಪೈಡರ್’ ಪತ್ತೆ

error: Content is protected !!