KS Eshwarappa | ಟಿಕೆಟ್ ಘೋಷಣೆ ಬೆನ್ನಲ್ಲೇ ಈಶ್ವರಪ್ಪ ತುರ್ತು ಮಾಧ್ಯಮಗೋಷ್ಠಿ, ಯಡಿಯೂರಪ್ಪ ವಿರುದ್ಧ ಮಾಡಿದ 5 ನೇರ ಆರೋಪಗಳೇನು?

KS Eshwarappa

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಲೋಕಸಭೆ ಬಿಜೆಪಿ ಟಿಕೆಟ್ ಘೋಷಣೆಯ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತುರ್ತು ಮಾಧ್ಯಮಗೋಷ್ಠಿ ನಡೆಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಟೀಕಾಪ್ರಹಾರಗಳನ್ನು ಮಾಡಿದ್ದಾರೆ.

VIDEO REPORT 

READ | ಕುವೆಂಪು ವಿವಿ ನೂತನ ಕುಲಪತಿಯಾಗಿ ಖ್ಯಾತ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಪುತ್ರ ಅಧಿಕಾರ ಸ್ವೀಕಾರ, ಅವರ ಫಸ್ಟ್ ರಿಯಾಕ್ಷನ್ ಇಲ್ಲಿದೆ

ಕೆ.ಎಸ್.ಈಶ್ವರಪ್ಪ ಮಾಡಿದ ಆರೋಪಗಳಿವು.
* ನಾನು ಮತ್ತು ಯಡಿಯೂರಪ್ಪ ಅವರು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದೇವು. ಈಗ ಅವರು ಮೋಸ ಮಾಡಿದ್ದಾರೆ.
* ಹಾವೇರಿಯಿಂದ ನನ್ನ ಪುತ್ರ ಕಾಂತೇಶ್ ಗೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದ ಯಡಿಯೂರಪ್ಪ ಮಾತು ತಪ್ಪಿದ್ದಾರೆ.
* ಹಠಕ್ಕೆ ಬಿದ್ದ ಬಿ.ಎಸ್.ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ, ಬಸವರಾಜ್ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಆದರೆ, ನನ್ನ ಮಗನಿಗೆ ಏಕೆ ಟಿಕೆಟ್ ಕೊಡಿಸಲಿಲ್ಲ? ಅವರು ಪಕ್ಷದ ಕತ್ತು ಹಿಸುಕಿದ್ದಾರೆ.
* ಕಾಂತೇಶ್ ಮಾತ್ರವಲ್ಲ. ಪ್ರತಾಪ್ ಸಿಂಹ, ಸದಾನಂದಗೌಡ, ಸಿ.ಟಿ.ರವಿ ಸೇರಿದಂತೆ ಅನೇಕರಿಗೆ ಅನ್ಯಾಯವಾಗಿದೆ. ಹಿಂದುತ್ವದ ವಿಚಾರದ ಬಗ್ಗೆ ಮಾತನಾಡುವವರಿಗೆ ಮೂಲೆಗುಂಪು ಮಾಡಲಾಗಿದೆ. ನಾನು ಅಸಮಾಧಾನಗೊಂಡಿರುವ ಇವರೆಲ್ಲರ ದನಿಯಾಗಬೇಕಿದೆ.
* ಕರ್ನಾಟಕದಲ್ಲಿ ಬಿಜೆಪಿಯು ಒಂದು ಕುಟುಂಬದ ಹಿಡಿತದಲ್ಲಿದೆ. ಹಾಗಾಗಿ ಪಕ್ಷವನ್ನು ಉಳಿಸಬೇಕಿದೆ.

error: Content is protected !!