Lokayukta trap | ಲೋಕಾಯುಕ್ತರ ಬಲೆಗೆ ಬಿದ್ದ ಎಪಿಎಂಸಿ ಕಾರ್ಯದರ್ಶಿ, ಕೇಸ್ ವರ್ಕರ್, ಕಾರಣವೇನು?

Lokayukta shivamogga

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆ ನೀಡಲು ಲಂಚ ಕೇಳಿದ್ದ ಅಧಿಕಾರಿ ಹಾಗೂ ಕೇಸ್ ವರ್ಕರ್ ಸೋಮವಾರ ಲೋಕಾಯುಕ್ತರ ಬೆಲೆಗೆ ಬಿದ್ದಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಕೋಡಿಗೌಡ ಹಾಗೂ ಕಮೀಷನ್ ಏಜೆಂಟ್ ಲೈಸೆನ್ಸ್‌ನ ಕೇಸ್ ವರ್ಕರ್ ಯೋಗೇಶ್ ಎಂಬುವವರು ಬಲೆಗೆ ಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ.
ವಾಣಿಜ್ಯ ಸಂಕೀರ್ಣ ಮಳಿಗೆಗಳನ್ನು ಲೀವ್ ಅಂಡ್ ಲೈಸೆನ್ಸ್ ಶುಲ್ಕದ ಆಧಾರದಲ್ಲಿ ಹಂಚಿಕೆ ಮಾಡುವ ಸಂಬಂಧ ಕರೆದಿದ್ದ ಟೆಂಡರ್‌ಗೆ ರವೀಂದ್ರ ವೀರಭದ್ರಪ್ಪ ನೇರಳೆ ಅರ್ಜಿ ಸಲ್ಲಿಸಿದ್ದರು.

READ | ವಿದ್ಯಾರ್ಥಿಗಳಿಗೆ ನೈತಿಕತೆ ಪಾಠ‌ ಮಾಡಿದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

₹1 ಲಕ್ಷ ಲಂಚಕ್ಕೆ ಬೇಡಿಕೆ
ಮಳಿಗೆ ಹಂಚಿಕೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ರವೀಂದ್ರ ಅವರು ಫೆ.29ರಂದು ಎಪಿಎಂಸಿ ಕಚೇರಿಗೆ ಹೋಗಿ ಕಾರ್ಯದರ್ಶಿ ಕೋಡಿಗೌಡ ಅವರನ್ನು ಭೇಟಿಯಾಗಿ ವಿಚಾರಿಸಿದಾಗ ನಿಮಗೆ ಮಳಿಗೆ ಆಗುತ್ತದೆ. ಆದರೆ, “ಹೆಡ್ ಆಫೀಸ್‌ಗೆ ಹೋಗಿ ಸರಿ ಮಾಡೋಕು, ಖರ್ಚು ಬರುತ್ತದೆ. ಸ್ವಲ್ಪ ನೋಡೋಬೇಕು, ಅದನ್ನು ಯೋಗೇಶ್‌ಗೆ ಹೇಳಿದ್ದೇನೆ ಅವರತ್ತ ಮಾತನಾಡಿಕೊಳ್ಳಿ” ಎಂದು ಹೇಳಿದ್ದರು. ನಂತರ ಕಮೀಷನ್ ಏಜೆಂಟ್ ಲೈಸೆನ್ಸ್‌ನ ಕೇಸ್ ವರ್ಕರ್ ಯೋಗೇಶ್ ಇವರನ್ನು ಭೇಟಿ ಮಾಡಿ ಕೇಳಿದಾಗ ಅವರು ₹2ಕ್ಕೆ ಬೇಡಿಕೆಯಿಟ್ಟು, ಬಳಿಕ ಫಿರ್ಯಾದಿಯ ಕೋರಿಕೆ ಮೇರೆಗೆ ₹1ಕ್ಕೆ ಒಪ್ಪಿಕೊಂಡಿರುತ್ತಾರೆ. ಈ ವಿಚಾರವಾಗಿ ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತರು ಬಲೆ ಬೀಸಿದ್ದಾರೆ.
ಕಾರ್ಯದರ್ಶಿ ಅವರು ಲಂಚದ ಹಣ ₹1 ಲಕ್ಷದಲ್ಲಿ ₹50 ಸಾವಿರ ಸ್ವೀಕರಿಸುವಾಗ ಲೋಕಾಯುಕ್ತರು ಬಲೆ ಬೀಸಿದ್ದಾರೆ. ಲೋಕಾಯುಕ್ತ ಡಿವೈಎಸ್.ಪಿ ಉಮೇಶ್ ನಾಯ್ಕ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮುಂದಿನ ತನಿಖೆಯನ್ನು ಲೋಕಾಯುಕ್ತ ಪಿಐ ಎಚ್.ಎಸ್. ಸುರೇಶ್ ಕೈಗೊಂಡಿದ್ದಾರೆ.

error: Content is protected !!