ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA (Health news): ಜಿಲ್ಲೆಯಲ್ಲಿ ಡೆಂಗೆ ಜ್ವರದ (Dengue fever) ಪ್ರಮಾಣ ಏರಿಕೆಯಾಗುತ್ತಿದೆ. ಭಾನುವಾರ 19 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ 9 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರೋಗದ ಲಕ್ಷಣ ಹೊಂದಿದ್ದ 50 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 19 ಪಾಸಿಟಿವ್ ಬಂದಿವೆ. ಜನವರಿ 1 ರಿಂದ ಇದುವರೆಗೆ 3,894 ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 426 ಜನರಲ್ಲಿ ಡೆಂಗೆ ಜ್ವರ ದೃಢಪಟ್ಟಿದೆ. ಪ್ರಸ್ತುತ 9 ಸಕ್ರಿಯ ಪ್ರಕರಣಗಳಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ತಿಳಿಸಿದೆ.
READ | ಸಿಪ್ಪೆಗೋಟು ಕಳವು ಮಾಡಿದ ಆರೋಪಿ ಅರೆಸ್ಟ್