Dengue | ಶಿವಮೊಗ್ಗದಲ್ಲಿ 358ಕ್ಕೇರಿದ ಡೆಂಗ್ಯೂ ಪ್ರಕರಣಗಳು

Dengue

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಉಲ್ಬಣವಾಗುತ್ತಲೇ ಇವೆ. ಡೆಂಗ್ಯೂ ರೋಗದ ಲಕ್ಷಣಗಳನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಗುರುವಾರ 17 ಜನರ ರಕ್ತ ಪರೀಕ್ಷಿಸಲಾಗಿದೆ. ಈ ಮೂಲಕ ಪ್ರಕರಣಗಳ ಸಂಖ್ಯೆ 358ಕ್ಕೆ ಏರಿಕೆಯಾಗಿದೆ.

READ | ಶಿವಮೊಗ್ಗದಲ್ಲಿ ನಾಳೆ ಶಾಲಾ, ಕಾಲೇಜು ರಜೆ ಬಗ್ಗೆ ಜಿಲ್ಲಾಡಳಿತ ಪ್ರಮುಖ ಘೋಷಣೆ

ಇದುವರೆಗೆ ಜಿಲ್ಲೆಯಲ್ಲಿ 3488 ಜನರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಸ್ತುತ ಆರು ಜನ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಹಾಲಿ 620 ಡೆಂಗ್ಯೂ ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಎಂಟು ಸಾವುಗಳು ಸಂಭವಿಸಿವೆ. ಹಾಸನ, ಶಿವಮೊಗ್ಗದಲ್ಲಿ ತಲಾ ಎರಡು, ಮೈಸೂರು, ಹಾವೇರಿ, ಧಾರವಾಡ, ಬಿಬಿಎಂಪಿನಲ್ಲಿ ತಲಾ ಒಂದೊಂದು ಸಾವಾಗಿದೆ.

error: Content is protected !!