Rain damage| ಶಿವಮೊಗ್ಗದಲ್ಲಿ ಮಳೆಗೆ ಭಾರೀ ಹಾನಿ, ನೆಲಸಮವಾದ ಮನೆಗಳು, ಎಷ್ಟು ಪ್ರಮಾಣದ ಹಾನಿಯಾಗಿದೆ?

shivamogga rain 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA (RAIN DAMAGE): 2024 ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಹ ಪರಿಸ್ಥಿತಿಯ ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಕೈಗೊಳ್ಳಲಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಮಾಧ್ಯಮದ ಪ್ರತಿನಿಧಿಗಳಿಗೆ ವಿಸ್ತೃತ ಮಾಹಿತಿ ನೀಡಿದರು.

Gurudatta Hegde 1

ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ ಗ್ರಾಮ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದ್ದು, ತುರ್ತು
ಸಂಧರ್ಭದಲ್ಲಿ ಕ್ರಮವಹಿಸಲು ಸೂಚಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ. ರಕ್ಷಣಾ ಕಾರ್ಯಕ್ಕಾಗಿ ಲಭ್ಯವಿರುವ ಸುರಕ್ಷತಾ ಉಪಕರಣಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು ಜಿಲ್ಲಾ ಅಗ್ನಿಶಾಮಕದಳ ಇವರಿಗೆ ಸೂಚಿಸಲಾಗಿದೆ. ಹಾಗೂ 15 ಜನಗಳ SDRF ತಂಡವನ್ನು ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಇರಿಸಿಕೊಳ್ಳಲಾಗಿದೆ.
ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ, ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈನಲ್ಲಿ ಭಾರಿ ಮಳೆಯಾಗಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ. ಜು.27ರ ವರೆಗೆ ಸರಾಸರಿ 668.0 ಮಿಮೀ ವಾಡಿಕೆ ಮಳೆ ಇದ್ದು, 1109 ಮಿಮೀ ಮಳೆಯಾಗಿರುತ್ತದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಾಡಿಕೆಗಿಂತ ಶೇ.66ರಷ್ಟು ಹೆಚ್ಚು ಮಳೆಯಾಗಿರುತ್ತದೆ.

READ | ಶಿವಮೊಗ್ಗದ ಈ‌ ಪ್ರದೇಶದಲ್ಲಿ ಅತ್ಯಧಿಕ ಮಳೆ ದಾಖಲು, ಹವಾಮಾನ ಇಲಾಖೆ ಮುನ್ಸೂಚನೆ ಏನು?

* ಜಿಲ್ಲೆಯಲ್ಲಿ ನೆರೆಯಿಂದಾಗಿ ಜೂನ್ ನಿಂದ ಒಟ್ಟು 4 ಮಾನವ ಹಾನಿಯಾಗಿದ್ದು, ಈಗಾಗಲೇ 2 ಪ್ರಕರಣಗಳಿಗೆ ₹5 ಲಕ್ಷ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಉಳಿದ 2 ಪ್ರಕರಣಕ್ಕೆ ಶೀಘ್ರವಾಗಿ ಪರಿಹಾರ ಧನ ವಿತರಿಸಲಾಗುವುದು
* ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ಒಟ್ಟು 10 ಜಾನುವಾರು ಮೃತಪಟ್ಟಿರುತ್ತವೆ. 8 ಪ್ರಕರಣಗಳ ವಾರಸುದಾರರಿಗೆ ಮಾರ್ಗಸೂಚಿಯಂತೆ
₹0.375 ಲಕ್ಷ ಪರಿಹಾರ ಧನ ವಿತರಿಸಲಾಗಿದೆ.
* ಅತಿ ಹೆಚ್ಚು ಮಳೆಯಿಂದ ಜೂನ್ ನಿಂದ ಸುಮಾರು 18 ಮನೆ ಪೂರ್ಣಹಾನಿಯಾಗಿರುತ್ತದೆ. 5 ಮನೆಗಳ ವಾರಸುದಾರರಿಗೆ ಈಗಾಗಲೆ ₹1.20 ಲಕ್ಷಗಳಂತೆ ₹6 ಲಕ್ಷಗಳ ಪರಿಹಾರ ವಿತರಿಸಲಾಗಿದೆ.
* 437 ಮನೆಗಳು ಭಾಗಶಃ ಹಾನಿಯಾಗಿದ್ದು, 40 ಮನೆಗಳಿಗೆ ₹1.71 ಲಕ್ಷಗಳ ಪರಿಹಾರ ವಿತರಿಸಲಾಗಿದೆ. ಉಳಿದ ಮನೆಗಳಿಗೆ ಶೀಘ್ರವಾಗಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು.
* ಜಿಲ್ಲೆಯಲ್ಲಿ 1540 ಹೆ. ಪ್ರದೇಶದಲ್ಲಿ ಭತ್ತ ಮತ್ತು 2300 ಹೆ. ಪ್ರದೇಶದಲ್ಲಿ ಮುನುಕಿನ ಜೋಳ ಕೃಷಿಬೆಳೆಗಳು ಜಲಾವೃತವಾಗಿರುವ ಕುರಿತು ಪ್ರಾಥಮಿಕ ವರದಿ ಬಂದಿರುತ್ತದೆ.
* ಜಿಲ್ಲೆಯಲ್ಲಿ ನೆರೆಹಾವಳಿಯಿಂದಾಗಿ ಮೆಸ್ಕಾಂ ಇಲಾಖೆಗೆ ಸಂಬಂಧಿಸಿದ 767 ವಿದ್ಯುತ್ ಕಂಬಗಳು ಹಾನಿಯಾಗಿದೆ ಹಾಗೂ 16 ಟ್ರಾನ್ಸ್ ಪಾರ್ಮರ್ ಗಳು ಹಾನಿಯಾಗಿರುತ್ತವೆ.
* ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 41.63 ಕಿ.ಮೀ. ರಾಜ್ಯ ಹೆದ್ದಾರಿ, 65.96 ಕಿ.ಮೀ.ಜಿಲ್ಲೆಯ ಮುಖ್ಯ ರಸ್ತೆ, 610.43 ಕಿ.ಮೀ. ಗ್ರಾಮೀಣ ರಸ್ತೆ, ಹಾನಿಯಾಗಿರುತ್ತದೆ. 111 ಸೇತುವೆಗಳಿಗೆ ಹಾನಿ.
* ಪ್ರವಾಹದಿಂದಾಗಿ 381 ಶಾಲಾ ಕಟ್ಟಡಗಳು, 260 ಅಂಗನವಾಡಿ ಕಟ್ಟಡಗಳು ಹಾಗೂ 9 ಆರೋಗ್ಯ ಕೇಂದ್ರಗಳು ಹಾನಿಗೊಳಗಾಗಿರುತ್ತವೆ.
* ಜಿಲ್ಲೆಯಲ್ಲಿ ಪ್ರವಾಹದಿಂದಾಗಿ 97 ಕರೆಗಳು ಹಾನಿಗೊಳಗಾಗಿರುತ್ತವೆ.
* ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವಿಠಲನಗರ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಗುಡ್ಡ ಕುಸಿದು ತಡೆಗೋಡೆ ಹಾನಿಯಾಗಿರುತ್ತದೆ.
* ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ -ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಒಡಾಟದಿಂದಾಗಿ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತವಾಗುವ ಸಂಭವ ಇರುವುದರಿಂದ ಭಾರಿ ವಾಹನಗಳ ಸಂಚಾರ ನಿಷೇಧಿಸಿ ಬದಲಿ ಮಾರ್ಗ ವಾಹನ ಸಂಚಾರಕ್ಕೆ ಅನುವು ಕೊಡಲಾಗಿದೆ
ಹೊರ ಹರಿವು ಹೆಚ್ಚಾದರೆ ನೆರೆ ಆತಂಕ
ಶಿವಮೊಗ್ಗ ಜಿಲ್ಲೆಯ ಗಾಜನೂರು ಜಲಾಶಯದಿಂದ ಜು.28ರಂದು 74,105 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದ್ದು, ಮಳೆ ಹೆಚ್ಚಾದಲ್ಲಿ ಜಲಾಶಯದ ಹೊರ ಹರಿವು ಹೆಚ್ಚಾದಲ್ಲಿ ಶಿವಮೊಗ್ಗ ನಗರ ವ್ಯಾಪ್ತಿಯ ವೆಂಕಟೇಶ್ವರ ನಗರ ಮತ್ತು ನ್ಯೂ ಮಂಡ್ಲಿ, ಗಾಂಧಿನಗರ, ಇಮಾಮ್ ಬಾಡ, ವಿದ್ಯಾನಗರದ ಕೆಲವು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇರುತ್ತದೆ. ತುರ್ತು ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸದರಿ ಪ್ರದೇಶಗಳ ನಿರ್ವಹಣೆ ಮಾಡಲು ತಂಡಗಳನ್ನು ರಚಿಸಿ ಕ್ರಮವಹಿಸಲು ಸೂಚಿಸಲಾಗಿದೆ.
* ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಹ ಸಂದರ್ಭದಲ್ಲಿ ಉಪಯೋಗಿಸಲು ಒಟ್ಟು 103 ಕಾಳಜಿ ಕೇಂದ್ರಗಳನ್ನು ಗುರುತಿಸಿಟ್ಟುಕೊಳ್ಳಲಾಗಿದೆ. ಈಗಾಗಲೆ ಶಿವಮೊಗ್ಗ ನಗರ ಮತ್ತು ಸಾಗರ ತಾಲೂಕು ತಾಳಗುಪ್ಪ ಹೋಬಳಿ ಮಂಡಗಳಲೆ ಗ್ರಾಮದಲ್ಲಿ ಮನೆಗೋಡೆಗಳು ಶಿಥಿಲಗೊಂಡಿರುವುದರಿಂದ 2 ಕಾಳಜಿ ಕೆಂದ್ರಗಳನ್ನು ತೆರೆಯಲಾಗಿದೆ.

error: Content is protected !!