Jogfalls | ಬೆಂಗಳೂರಿನಿಂದ ಬಂದವ ಜೋಗದಲ್ಲಿ ನಾಪತ್ತೆ!

Jogfalls

 

 

ಸುದ್ದಿ ಕಣಜ.ಕಾಂ ಜೋಗ
JOG: ಜೋಗ ಜಲಪಾತ ವೀಕ್ಷಿಸುವುದಕ್ಕೆಂದು ಸಾಗರ ತಾಲೂಕು ಜೋಗಕ್ಕೆ ಬಂದಿದ್ದ ಯುವಕನೊಬ್ಬ ನಾಪತ್ತೆಯಾಗಿದ್ದಾನೆ.
ಬೆಂಗಳೂರಿನಲ್ಲಿ ಟೀ‌ ಕ್ಯಾಂಟೀನ್ ನಡೆಸುತ್ತಿದ್ದ ಗದಗ ಮೂಲದ ಆನಂದ್ (24) ಕಣ್ಮರೆಯಾಗಿರುವ ಯುವಕ. ಈತನಿಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ.
ಜು.15ರಂದು ಜೋಗ ಜಲಪಾತ ವೀಕ್ಷಿಸುವುದಕ್ಕೆಂದು ಆಗಮಿಸಿದ್ದಾನೆ. ಆತನ ಬ್ಯಾಗ್ ಸಹ ಲಭಿಸಿದೆ. ಆದರೆ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಕಾರ್ಗಲ್ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

error: Content is protected !!