Arrest | ಇವರಿಗೆ ದೇವಸ್ಥಾನಗಳೇ ಟಾರ್ಗೆಟ್, ಮೂರು ಟೆಂಪಲ್ ಗಳಿಗೆ ಕನ್ನ ಹಾಕಿದವರು ಅರೆಸ್ಟ್

Crime news

 

 

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ಚಿಡುವ ಗ್ರಾಮದ ಶ್ರೀ ವೀರಾಂಜನೇಯ ದೇವಸ್ಥಾನದ ಬಾಗಿಲು ಒಡೆದು ಕಳವು ಮಾಡಿದ ಪ್ರಕರಣ ಸಂಬಂಧ ಆರೋಪಿಗಳನ್ನು‌ ಬಂಧಿಸಲಾಗಿದೆ.
ಭದ್ರಾವತಿಯ ಹೊಸಬುಳ್ಳಾಪುರ ನಿವಾಸಿ ಅರುಣ್ ಕುಮಾರ್ ಜಿ ಅಲಿಯಾಸ್ ಲಾಲಾ(28), ಎ.ಆಕಾಶ್ ಅಲಿಯಾಸ್ ಚೋಟು(24) ಬಂಧಿತ ಆರೋಪಿಗಳು.

READ | ಕೊಡಚಾದ್ರಿ ಸಮೀಪ ಧರೆ ಕುಸಿತ, ಕಿರುಸೇತುವೆ ಕುಸಿತದಿಂದ ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಜನ, ಮನೆ ಕುಸಿದರೂ ಅಧಿಕಾರಿಗಳು ಡೋಂಟ್ ಕೇರ್!

ಯಾವೆಲ್ಲ‌ ದೇವಸ್ಥಾನಗಳಿಗೆ ಕನ್ನ?
ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023ರ ನವೆಂಬರ್ 23ರಂದು ಕಸಗಾರು ಗ್ರಾಮದ ಗಾಳಿ ಮಾರಮ್ಮ ದೇವಸ್ಥಾನದಲ್ಲಿ ಕಳವು ಹಾಗೂ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2023ರ ಆಗಸ್ಟ್ 9 ರಂದು ಬಾಳಗಾರು ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಕಳ್ಳತನ ಸೇರಿ ಒಟ್ಟು 3 ದೇವಸ್ಥಾನ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು ₹70,000 ಮೌಲ್ಯದ ಬೆಳ್ಳಿ ವಸ್ತುಗಳು, ದೇವಸ್ಥಾನದ ಘಂಟೆಗಳು, ಜಾಗಟೆಗಳು, ಹರಿವಾಣಗಳು, ಕಲಶಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಓಮಿನಿ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಭೇದಿಸಿದ ತಂಡ
ಕಳುವಾದ ಸಾಮಗ್ರಿ ಮತ್ತು ಆರೋಪಿತರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮಾರಡ್ಡಿ, ಎ.ಜಿ.ಕಾರಿಯಪ್ಪ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಪೊಲೀಸ್ ಉಪಾಧೀಕ್ಷಕ ಗಜನಾನನ ವಾಮನ ಸುತರ, ಮಾಳೂರು ಸಿಪಿಐ ಕೆ.ಶ್ರೀಧರ್ ಮೇಲ್ವಿಚಾರಣೆಯಲ್ಲಿ ಪಿಎಸ್.ಐ ಕುಮಾರ್ ಕೂರಗುಂದ, ಶಿವಾನಂದ ದರೇನವರ್ ನೇತೃತ್ವದಲ್ಲಿ ಸಿಬ್ಬಂದಿ ರಾಜಶೇಖರ ಶೆಟ್ಟಿಗಾರ್, ಮಂಜುನಾಥ್, ಲೋಕೇಶ್, ಪ್ರದೀಪ್, ಮಂಜುನಾಥ್, ವಿವೇಕ್, ಸಂತೋಷ್, ಪುನೀತ್, ಚೇತನ್, ಅಭಿಲಾಷ್ ನೇತೃತ್ವದ ತನಿಖಾ ತಂಡ ಪ್ರಕರಣವನ್ನು ಭೇದಿಸಿದೆ.

error: Content is protected !!