Court news | ಟ್ವಿಸ್ಟ್ ಇರ್ಫಾನ್ ಕೊಲೆ, ಆರು‌ ಜನರಿಗೆ ಜೀವಾವಧಿ ಶಿಕ್ಷೆ, ಇಲ್ಲಿದೆ ಕೇಸ್ ವಿವರ

murder

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
(COURT NEWS) SHIVAMOGGA: ಅಣ್ಣಾನಗರ ನಿವಾಸಿ ಇರ್ಫಾನ್ ಅಲಿಯಾಸ್ ಟ್ವಿಸ್ಟ್ ಇರ್ಫಾನ್ ಕೊಲೆ ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಏಳು ಜನರಿಗೆ ಜೀವಾವಧಿ ಶಿಕ್ಷೆ ಆರ್.ಎಂಎಲ್ ನಗರದ ಲತೀಫ್ (20), ಟಿಪ್ಪುನಗರದ ಫರ್ವೇಜ್ @ ಪರ್ರು (23), ಟಿಪ್ಪುನಗರ ನಿವಾಸಿಗಳಾದ ಸೈಯದ್ ಜಿಲಾನ್ @ ಜೀಲಾ (19), ಜಾಫರ್ ಸಾದಿಕ್ (20), ಮೊಹಮ್ಮದ್ ಶಾಬಾಜ್ @ ಶಾಬು (19), ಅಬ್ದುಲ್ ಶಾಬೀರ್ @ ಶಾಬಿರ್ (24), ತಸ್ಲೀಂ @ ಮೊಹಮ್ಮದ್ ಯೂಸೂಫ್(26) ಇವರುಗಳ‌ ವಿರುದ್ಧದ ಆರೋಪ ದೃಡಪಟ್ಟಿದ್ದು, ನ್ಯಾಯಾಧಿಶರಾದ ಜಿ.ಆರ್.ಪಲ್ಲವಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹5,000 ದಂಡ ವಿಧಿಸಿದ್ದು, ಮೃತ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ ನ ಹೆಂಡತಿಗೆ ದಂಡದ ಮೊತ್ತದಲ್ಲಿ ₹30,000 ಗಳನ್ನು ನೀಡಲು ಆದೇಶಿಸಿರುತ್ತಾರೆ.

READ | 23 ಮನೆಗಳಿಗೆ ಕನ್ನ ಹಾಕಿದವ ಅರೆಸ್ಟ್ | ಲಕ್ಷಾಂತರ ಮೌಲ್ಯದ ಚಿನ್ನ ಕದ್ದಿದ್ದ ಇಬ್ಬರ ಬಂಧನ

ಪ್ರಕರಣದ ಹಿನ್ನೆಲೆ
2021ರ ಸೆಪ್ಟೆಂಬರ್ 18ರಂದು ರಾತ್ರಿ ಟಿಪ್ಪುನಗರ 7ನೇ ಮುಖ್ಯ ರಸ್ತೆಯ 4ನೇ ಕ್ರಾಸ್ ನ ಹತ್ತಿರ ಗಾಂಜಾ ಮಾರಾಟದ ವಿಚಾರವಾಗಿ ಇರ್ಫಾನ್ @ ಟ್ವಿಸ್ಟ್ ಇರ್ಫಾನ್ (36) ಈತನೊಂದಿಗೆ ಜಗಳ ತೆಗೆದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುತ್ತಾರೆಂದು ಮೃತನ ಸಹೋದರ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆಗಿನ ತನಿಖಾಧಿಕಾರಿ ಎಂ.ದೀಪಕ್ ತನಿಖೆ ಪೂರೈಸಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕಿ ಪಿ.ಓ.ಪುಷ್ಪಾ ವಾದ ಮಂಡಿಸಿದ್ದರು.

Crime logo

error: Content is protected !!