ಸುದ್ದಿ ಕಣಜ.ಕಾಂ ಶಿವಮೊಗ್ಗ
(Power cut) SHIVAMOGGA: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಘಟಕ-6ರ ವ್ಯಾಪ್ತಿಯಲ್ಲಿ ಹೊಸ 11 ಕೆವಿ ಮಾರ್ಗದ ಕಾಮಗಾರಿ ನಿರ್ವಹಣೆ ಇರುವುದರಿಂದ ಆ.6 ರಂದು ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಕೋರಿದೆ.
ಎಲ್ಲೆಲ್ಲಿ ಪವರ್ ಕಟ್?
ಸೀಗೆಹಟ್ಟಿ, ರವಿವರ್ಮ ಬೀದಿ, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಭಾರತಿ ಕಾಲೋನಿ, ಪಂಚವಟಿ ಕಾಲೋನಿ, ಅಮೀರ್ ಅಹ್ಮದ್ ಸರ್ಕಲ್, ಕೃಷಿ ಕಚೇರಿ, ಮಾಕಮ್ಮ ಈದಿ, ಕೆರೆದುರ್ಗಮ್ಮನ ಕೇರಿ, ಪುಟ್ಟನಂಜಪ್ಪ ಕೇರಿ, ಆಜಾದ್‌ನಗರ, ಕಲಾರ್‌ಪೇಟೆ, ಸಿದ್ದಯ್ಯರಸ್ತೆ, ಇಮಾಮ್ ಬಡಾ, ಮುರಾದ್‌ನಗರ, ಕ್ರೌನ್ ಪ್ಯಾಲೇಸ್ ಶಾದಿ ಮಹಾಲ್, ತಹಾ ಶಾದಿ ಮಹಾಲ್, ಮಂಡಕ್ಕ ಭಟ್ಟಿ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.