Bhadra dam | ಭದ್ರಾ ಜಲಾಶಯ ಸುತ್ತ ಇಂದಿನಿಂದ ನಿಷೇಧಾಜ್ಞೆ ಜಾರಿ, ಯಾರೂ ಡ್ಯಾಂ ಸುತ್ತ ಸುಳಿಯುವಂತಿಲ್ಲ, ಕಾರಣವೇನು?

Bhadra Dam

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭದ್ರಾ ಜಲಾಶಯ ತುಂಬಿದ್ದೇ ಅದರಿಂದ ನೀರು ನದಿಗೆ ಬಿಡಲಾಗಿದೆ. ಜಲಾಶಯದ ವೈಭವ ಕಣ್ತುಂಬಿಕೊಳ್ಳಲು ಶಿವಮೊಗ್ಗ ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಜನರು ಆಗಮಿಸುತ್ಗಿದ್ದಾರೆ. ಈ ನಡುವೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ.

READ | ಭದ್ರಾ ಜಲಾಶಯದಿಂದ ವಾಣಿವಿಲಾಸಕ್ಕೆ ನೀರು

ಭದ್ರಾ ಜಲಾಶಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಬಾಗಿನ ಅರ್ಪಿಸಲು ಮುಖಂಡರುಗಳು, ರೈತರುಗಳು ಜಲಾಶಯ ವೀಕ್ಷಣೆಗೆ ಬರುತ್ತಿದ್ದು, ಜಲಾಶಯದ ಹಿತದೃಷ್ಟಿಯಿಂದ ಸುರಕ್ಷೆ ವಹಿಸುವುದು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ಭದ್ರಾ ಜಲಾಶಯದ ಸುತ್ತ-ಮುತ್ತ ಪ್ರದೇಶದ ವ್ಯಾಪ್ತಿಯಲ್ಲಿ ಸಿಆರ್ ಪಿಸಿ ಕಲಂ 144 ಅಡಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸುವಂತೆ ಕೋರಲಾಗಿತ್ತು.
ಅದರನ್ವಯ ಆಗಸ್ಟ್ 1ರಿಂದ 31 ರವರೆಗೆ ಭದ್ರಾ ಜಲಾಶಯದ ಪ್ರದೇಶದ ಸುತ್ತ-ಮುತ್ತಲು 500 ಮೀ ವ್ಯಾಪ್ತಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಕಲಂ 163 ರಂತೆ ನಿಷೇದಾಜ್ಞೆ ಜಾರಿಗೊಳಿಸಿ‌ ಜಿಲ್ಲಾಧಿಕಾರಿ‌ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.

error: Content is protected !!