Shimoga airport | ಶಿವಮೊಗ್ಗ ವಿಮಾನ ನಿಲ್ದಾಣ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಹತ್ವದ ಪ್ರಕಟಣೆ

BY Raghavendra

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
(SHIMOGA AIRPORT) SHIVAMOGGA: ಜನವರಿಯಿಂದ ಸ್ಥಗಿತಗೊಂಡ ರಾತ್ರಿ ಲ್ಯಾಂಡಿಂಗ್ (night landing) ಕೆಲಸದ ಪುನರಾರಂಭವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅನುಮೋದಿಸಿದೆ.
ವಿಮಾನ ನಿಲ್ದಾಣದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮಾಡುತ್ತಿದ್ದು, ಡಿಜಿಸಿಎ ಅಧಿಕಾರಿಗಳು ರೇಖಾಚಿತ್ರಗಳು, ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಪರಿಕಲ್ಪನೆ, ವಿನ್ಯಾಸ ಮತ್ತು ಕಾಮಗಾರಿಗೆ ಅನುಮೋದನೆ. ನೀಡಿದೆ.

READ | ಡೆಂಗ್ಯೂ ಪಾಸಿಟಿವಿಟಿಯಲ್ಲಿ ಶಿವಮೊಗ್ಗ ಫಸ್ಟ್! ವೈದ್ಯ ವಿದ್ಯಾರ್ಥಿಗಳಿಗೂ ಡೆಂಗ್ಯೂ ಪಾಸಿಟಿವ್

ಶೇ.65ರಷ್ಟು ಕಾಮಗಾರಿ ಪೂರ್ಣ
ಜನವರಿ 2024ರ ಹೊತ್ತಿಗೆ ಶೇ.65 ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸವು ಕನಿಷ್ಠ ಎರಡು ತಿಂಗಳಗಳ‌ ಕಾಲಾವಕಾಶ ತೆಗೆದುಕೊಳ್ಳಲಿದೆ. ಎಲ್ಲಾ ಹವಾಮಾನ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುವ ಮೊದಲು ಡಿಜಿಸಿಎ ಪೂರ್ಣಗೊಂಡ ಯೋಜನೆಯನ್ನು ಮರುಪರಿಶೀಲಿಸುತ್ತದೆ.
ಈ ಎಲ್ಲಾ ಪ್ರಕ್ರಿಯೆಗಳು 3-4 ತಿಂಗಳುಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಚಳಿಗಾಲ‌ ಆರಂಭಕ್ಕೂ ಮೊದಲು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಎಲ್ಲಾ ಹವಾಮಾನ ಕಾರ್ಯಾಚರಣೆಗೆ ನವೀಕರಿಸಲಾಗುತ್ತದೆ. ಈ ವಿಮಾನ ನಿಲ್ದಾಣದಲ್ಲಿ ಪ್ರತಿಕೂಲ ಹವಾಮಾನ, ಮಳೆ, ರಾತ್ರಿ ಮುಂತಾದ ಅನಿರೀಕ್ಷಿತ ವಿಮಾನ ಕಾರ್ಯಾಚರಣೆ ಮತ್ತು ಪ್ರಯಾಣಿಕರ ಅನಾನುಕೂಲತೆಗಳನ್ನು ನಿವಾರಿಸಲಾಗುತ್ತದೆ‌ ಎಂದು ಸಂಸದ ಬಿ.ವೈ.ರಾಘವೇಂದ್ರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Night land
ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್.

error: Content is protected !!