ಸುದ್ದಿ ಕಣಜ.ಕಾಂ ಶಿವಮೊಗ್ಗ
(Water supply) SHIVAMOGGA: ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಆರ್.ಎಂ. 9 ಕೊಳವೆ ಮಾರ್ಗದ ಲಿಂಕಿಂಗ್ ಸಂಬಂಧ ಪಂಪಿಂಗ್ ನಿಲುಗಡೆ ಮಾಡುವುದರಿಂದ ಆ.5 ರಂದು ನಗರದ ಸೂಳೆಬೈಲು, ಊರುಗಡೂರು ಮಾರಿಕಾಂಬ ದೇವಸ್ಥಾನ, ಸಹ್ಯಾದ್ರಿ ಕಾಲೇಜ್ (ಎಂ.ಆರ್.ಎಸ್.), ಸಹ್ಯಾದ್ರಿ ಕಾಲೇಜ್-2, ಗುಡ್ಡೇಕಲ್, ಪುರಲೆ, ಸಿದ್ದೇಶ್ವರ ನಗರ, ವಾದಿ-ಎ-ಹುದಾ, ಮೆಹಬೂಬ್‌ನಗರ, ಹರಿಗೆ, ಮಲವಗೊಪ್ಪ ಪ್ರದೇಶಗಳಲ್ಲಿ ನೀರು ಸರಬರಾಜು ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
READ | ಗಾಜನೂರು ಡ್ಯಾಂ ನಾಳೆಯಿಂದ ಪ್ರವೇಶ ನಿಷೇಧ, ಕಾರಣವೇನು? ಏನೆಲ್ಲ ನಿಯಮ ವಿಧಿಸಲಾಗಿದೆ?