ಪದವೀಧರರಿಗೆ ಉದ್ಯೋಗ ಅವಕಾಶ, 4,135 ಹುದ್ದೆಗಳಿಗೆ ನೇಮಕಾತಿ

 

 

ಸುದ್ದಿ ಕಣಜ.ಕಾಂ | KARNATKA | JOB JUNCTION
ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್)ಯು 11 ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಟ್ಟು 4,135 ಬ್ಯಾಂಕ್ ಆಫಿಸರ್ ಹುದ್ದೆಗಳ ನೇಮಕಾತಿ ಮುಂದಾಗಿದೆ.
ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಯಾವುದೇ ಪ್ರಾದೇಶಗಳಲ್ಲಿ ನಡೆಸಲು ಅವಕಾಶ ನೀಡಿಲ್ಲ. ಹೀಗಾಗಿ, ಕನ್ನಡಿಗರ ನಿರೀಕ್ಷೆಯ ಮೇಲೆ ತಣ್ಣೀರು ಎರಚಿದಂತಾಗಿದೆ. ಈ ಸಲವೂ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳು ನಡೆಯಲಿವೆ.

ಪ್ರಮುಖ ದಿನಾಂಕಗಳು

ನವೆಂಬರ್ 20ರಿಂದ ಆನ್ಲೈನ್ ಮೂಲಕ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನವೆಂಬರ್ 10 ಅರ್ಜಿ ಸಲ್ಲಿಕೆಗೆ ಅಂತಿಮ ದಿನವಾಗಿದೆ. 20ರಿಂದ 30 ವರ್ಷದೊಳಗಿನವರು ಅರ್ಜಿಗಳನ್ನು ಸಲ್ಲಿಸಬಹುದು.
ಯಾವ್ಯಾವ ಬ್ಯಾಂಕ್ ಗಳಲ್ಲಿ ನೇಮಕಾತಿ
ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯುಸಿಒ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ಮತ್ತು ಸಿಂದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ.

READ | ಮಂಗಳೂರು ಕಸ್ಟಮ್ಸ್ ಕಚೇರಿಯಲ್ಲಿ 8, 10ನೇ, ಐಟಿಐ ಪಾಸಾದವರಿಗೆ ಉದ್ಯೋಗ ಅವಕಾಶ, ಆಕರ್ಷಕ ವೇತನ

ಪ್ರಮುಖ ಅಂಶಗಳು
ಪರೀಕ್ಷೆಯು ರೀಸನಿಂಗ್ ಎಬಿಲಿಟಿ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್ ಭಾಷೆಯನ್ನು ಒಳಗೊಂಡಿರಲಿದೆ. ರೀಸನಿಂಗ್ ಆಂಡ್ ಕಂಪ್ಯೂಟಟರ್ ಆಪ್ಟಿಟ್ಯೂಡ್ 60 ಅಂಕ, ಇಂಗ್ಲಿಷ್ ಭಾಷೆ 40 ಅಂಕ, ಡಾಟಾ ಅನಲೈಸಿಸ್ ಮತ್ತು ಇಂಟರ್ ಪ್ರಿಟೇಷನ್ 60 ಅಂಕ, ಜನರಲ್ ಎಕಾಮನಿ ಮತ್ತು ಬ್ಯಾಂಕಿಂಗ್ ಅವೇರ್ನೆಸ್ 40 ಅಂಕ ಸೇರಿ ಒಟ್ಟು 200 ಅಂಕಗಳ ಮೂರು ಗಂಟೆಯ ಪರೀಕ್ಷೆ ನಡೆಯಲಿದೆ. ಜೊತೆಗೆ, 30 ನಿಮಿಷಗಳ 25 ಅಂಕದÀ ಲೆಟರ್ ರೈಟಿಂಗ್ ಮತ್ತು ಪ್ರಬಂಧ ಬರಹದ ಪರೀಕ್ಷೆ ನಡೆಯಲಿದೆ.

ಬ್ಯಾಂಕ್ ಹುದ್ದೆ
ಬ್ಯಾಂಕ್ ಆಫ್ ಇಂಡಿಯಾ 588
ಬ್ಯಾಂಕ್ ಆಫ್ ಮಹಾರಾಷ್ಟ್ರ 400
ಕೆನರಾ ಬ್ಯಾಂಕ್  650
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 620
ಇಂಡಿಯನ್ ಓವರ್ ಸೀಸ್ ಬ್ಯಾಂಕ್ 98
ಪಂಜಾಬ್, ಸಿಂದ್ ಬ್ಯಾಂಕ್ 427
ಯುಸಿಒ ಬ್ಯಾಂಕ್  440
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ  912
ಒಟ್ಟು 4,135

WEBSITES

https://www.suddikanaja.com/2021/01/26/koo-application-developed-by-indian-got-good-response-from-users/

error: Content is protected !!