Shivamogga job news: ಶಿವಮೊಗ್ಗದ 18 ಕೇಂದ್ರಗಳಲ್ಲಿ ನಡೆಯಲಿದೆ ಪೊಲೀಸ್ ಕಾನ್ ಸ್ಟೆಬಲ್ ಪರೀಕ್ಷೆ, ಹಾಲ್ ಟಿಕೆಟ್ ಗಾಗಿ ಲಿಂಕ್ ಕ್ಲಿಕ್ಕಿಸಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್)(ಪುರುಷ ಮತ್ತು ಮಹಿಳಾ) 3,533 ಹುದ್ದೆಗಳ ಲಿಖಿತ ಪರೀಕ್ಷೆಗಳನ್ನು ಅಕ್ಟೋಬರ್ 24ರಂದು ಮಧ್ಯಾಹ್ನ 12 ರಿಂದ ಮಧ್ಯಾಹ್ನ 1.30ರ ವರೆಗೆ ರಾಜ್ಯದಾದ್ಯಂತ ನಡೆಸಲಾಗುತ್ತಿದೆ. ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ | ಪದವೀಧರರಿಗೆ ಉದ್ಯೋಗ ಅವಕಾಶ, 4,135 ಹುದ್ದೆಗಳಿಗೆ ನೇಮಕಾತಿ

ಜಿಲ್ಲೆಯ 8,500 ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಕರೆ ಪತ್ರವನ್ನು ಇಲಾಖೆಯ ಅಧಿಕೃತ ವೆಬ್‍ ಸೈಟ್ www.recruitment.ksp.gov.in ಅಥವಾ www.ksp.gov.in ನಿಂದ ಡೌನ್‍ ಲೋಡ್ ಮಾಡಿಕೊಂಡು ಅಗತ್ಯ ಗುರುತಿನ ಚೀಟಿಯೊಂದಿಗೆ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

error: Content is protected !!