ದೇಶದಲ್ಲಿ 100 ಕೋಟಿ ಕೊರೊನಾ ಲಸಿಕೆ, ಶಿವಮೊಗ್ಗದಲ್ಲಿ ಮನೆ ಮಾಡಿದ ಸಂಭ್ರಮ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯ ಗಳಿಸಲು ಬಹುಮುಖ್ಯವಾದ ಲಸಿಕಕಾರಣಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರ ಒಟ್ಟು 100 ಕೋಟಿ ಲಸಿಕೆಗಳನ್ನು ನೀಡುವ ಮೂಲಕ ಸಾಧನೆ ಮಾಡಿದೆ.

ಈ ಸುವರ್ಣ ಗಳಿಗೆಯನ್ನು ಶಿವಮೊಗ್ಗದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ನಗರ ಬಿಜೆಪಿಯಿಂದ ಬಿಜೆಪಿಯ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ವಿನಮಯ ಮಾಡಲಾಯಿತು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರಿ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳನ್ನು ನೀಡುವ ಮೂಲಕ ಸಾಧನೆ ಮೆರೆದಿದೆ. ಇದರ ಪ್ರಯುಕ್ತ ಸಿಹಿ ಹಂಚಲಾಯಿತು. ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಕೆ.ವಿ. ಅಣ್ಣಪ್ಪ, ಬಾಲು, ಕುಮಾರಸ್ವಾಮಿ, ಈಶ್ವರ್ ಉಪಸ್ಥಿತರಿದ್ದರು.

error: Content is protected !!