ತಾಳಗುಪ್ಪದಲ್ಲಿ ಹುಚ್ಚುನಾಯಿ ಕಾಟಕ್ಕೆ ತತ್ತರಿಸಿದ ಜನ, ಮಕ್ಕಳನ್ನು ಹೊರಬಿಡುವುದಕ್ಕೂ ಭೀತಿ

 

 

ಸುದ್ದಿ ಕಣಜ.ಕಾಂ | TALUK | DOG BITE
ಸಾಗರ: ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಹುಚ್ಚು ನಾಯಿಯೊಂದು ಬುಧವಾರ ಹಲವರ ಮೇಲೆ ಎರಗಿ ಆತಂಕ ಹುಟ್ಟಿಸಿದೆ. ಇದುವರೆಗೆ ಒಂದು ಮಗು ಮತ್ತು ಜಾನುವಾರುಗಳನ್ನು ಕಚ್ಚಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ತಾಳಗುಪ್ಪ ಗ್ರಾಮದ ಪೇಟೆ, ಮಾಯಾ ಬಜಾರ್, ಮಡಿವಾಳರ ಕೇರಿ, ಬೆಳ್ಳಣ್ಣೆ, ಗಿಳಿಗಾರು ಇನ್ನಿತರ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಮಕ್ಕಳನ್ನು ಹೊರಬಿಡುವುದಕ್ಕೂ ಜನ ಭಯ ಪಡುತ್ತಿದ್ದಾರೆ.

ಗಿಳಿಗಾರಿನಲ್ಲಿ ಹುಚ್ಚು ನಾಯಿಯು 10 ಜಾನುವಾರು ಮತ್ತು ಒಂದು ಮಗುವನ್ನು ಕಚ್ಚಿದೆ. ಗಾಯಗೊಂಡವರನ್ನು ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಗ್ರಾಮದ ಯುವಕರು ಸೇರಿ ನಾಯಿಯನ್ನು ಸಾಯಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

error: Content is protected !!